ಶಿಕ್ಷಕರು ಜಾತಕ ಪಕ್ಷಿಗಳಾಗಿದ್ದಾರೆ-ಸಚಿವರೇ ಗಮನಿಸಿ : ಅಶೋಕ ಸಜ್ಜನ ಮನವಿ

ಧಾರವಾಡ: ಕಳೆದ ಐದು ವರ್ಷದಲ್ಲಿ ಒಂದೇ ಸಲ ವರ್ಗಾವಣೆ ನಡೆದಿದೆ. ಇದರಿಂದ ಶಿಕ್ಷಕರು ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ ಎಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಸಚಿವ ಸುರೇಶಕುಮಾರ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸಂಘದ ಮೂಲಕ ಪತ್ರ ಬರೆದಿರುವ ಅಶೋಕ ಸಜ್ಜನ, ಶೀಘ್ರವಾಗಿ ವರ್ಗಾವಣೆ ಪ್ರಕ್ರಿಯೆಯನ್ನ ಆರಂಭಿಸಿ ಸಾವಿರಾರೂ ಶಿಕ್ಷಕರ ಸಮಸ್ಯೆಯನ್ನ ಬಗೆಹರಿಸುವಂತೆ ಕೇಳಿಕೊಂಡಿದ್ದಾರೆ.
ವರ್ಗಾವಣೆ ಶೇಕಡಾ ಮಿತಿಯನ್ನ 25ಯನ್ನ 40ಕ್ಕೆ ಸಡಿಲಗೊಳಿಸಬೇಕು. ಹೊಸ ತಾಲೂಕುಗಳಿಗೆ ಖಾಲಿ ಹುದ್ದೆಗಳ ಶೇಕಡಾ ಪ್ರಮಾಣವನ್ನ ವಿಂಗಡಿಸಿ. ಪರಸ್ಪರ ವರ್ಗಾವಣೆ ನಿಯಮಗಳನ್ನ 7ವರ್ಷದಿಂದ 3 ವರ್ಷಕ್ಕೆ ಸಡಿಲಗೊಳಿಸಬೇಕೆಂದು ಸಜ್ಜನ ಸಚಿವರನ್ನ ವಿನಂತಿಸಿಕೊಂಡಿದ್ದಾರೆ.
ಶಿಕ್ಷಕರ ಬೇಡಿಕೆಯನ್ನ ಆದಷ್ಟು ಬೇಗನೇ ಈಡೇರಿಸಬೇಕೆಂದು ಕೂಡಾ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಕೇಳಿಕೊಂಡಿದ್ದಾರೆ.