ಅಂಬ್ಯುಲೆನ್ಸ್ ಲ್ಲಿ ಕಾರ್ಮಿಕರು: ಚಿನ್ನದ ಗಣಿಯವರಿಂದಲೇ ಮಹಾ ಯಡವಟ್ಟು
ರಾಯಚೂರು: ರೋಗಿಗಳಿಗೆ ಬಳಕೆಯಾಗಬೇಕಾಗಿದ್ದ ಅಂಬ್ಯುಲೆನ್ಸನ್ನ ಕಾರ್ಮಿಕರ ಸಾಗಾಣಿಗೆಕೆ ಬಳಕೆ ಮಾಡಿಕೊಳ್ಳಲಾಗಿದ್ದು, ಗ್ರಾಮಸ್ಥರೇ ಹಟ್ಟಿ ಚಿನ್ನದ ಗಣಿಯವರನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಲಿಂಗಸೂಗುರು ತಾಲ್ಲೂಕಿನ ನಲ್ಲಿರುವ ಹಟ್ಟಿ ಚಿನ್ನದ ಗಣಿಯಿಂದ ದೇವದುರ್ಗ ತಾಲ್ಲೂಕಿನ ಊಟಿ ಚಿನ್ನದ ಗಣಿಗೆ ಆಂಬ್ಯೂಲೆನ್ಸ ನಲ್ಲಿ ಕಾರ್ಮಿಕರನ್ನು ಕರೆದೊಯಲಾಗುತ್ತಿತ್ತು. ಕಳೆದ ಎರಡು ತಿಂಗಳುಗಳಿಂದ ಆಂಬ್ಯೂಲೆನ್ಸ್ ನಲ್ಲಿ ಕಾರ್ಮಿಕರ ಸಾಗಣೆ ಮಾಡುತ್ತಿದ್ದರಿಂದ ದೇವದುರ್ಗ ತಾಲ್ಲೂಕಿನ ವಂದಲಿ ಗ್ರಾಮದಲ್ಲಿ ಆಂಬ್ಯೂಲೆನ್ಸ್ ತಡೆದು ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದರು.
ಕೋವಿಡ್-19 ಸಂದರ್ಭದಲ್ಲಿ ರೋಗಿಗಳನ್ನು ಕರೆದುಕೊಂಡು ಹೋಗಲು ಆಂಬ್ಯೂಲೆನ್ಸ್ ಗಳ ಕೊರತೆಯಿದ್ದಾಗಲೂ ಕಾರ್ಮಿಕರ ಸಾಗಣೆ ಎಷ್ಟು ಸರಿ ಎಂದು ಪ್ರಶ್ನಿಸಿದ ಗ್ರಾಮಸ್ಥರು, ತಕ್ಷಣವೇ ಇದನ್ನ ನಿಲ್ಲಿಸಬೇಕೆಂದು ಎಚ್ಚರಿಸಿದರು.