Posts Slider

Karnataka Voice

Latest Kannada News

ಮೀನು ಮಾರುಕಟ್ಟೆಗೆ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಹೋಗಿದ್ದಾದರು ಯಾಕೆ..?

1 min read
Spread the love

ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ಮಾರ್ಟ್ ಸಿಟಿ ಯೋಜನೆಯಡಿ, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹುಬ್ಬಳ್ಳಿ ಧಾರವಾಡದಲ್ಲಿ ಕೈಗೊಂಡಿದ್ದೇವೆ, ಆರು ಪ್ರಮುಖ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ – ಧಾರವಾಡ ಸ್ಮಾರ್ಟ್‌ಸಿಟಿ   ಯೋಜನೆಯಡಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಚಿಟಗುಪ್ಪಿ ಆಸ್ಪತ್ರೆ ಅಭಿವೃದ್ಧಿ ಯೋಜನೆಯಲ್ಲಿ 26.18 ಕೋಟಿ ವೆಚ್ಚದ ಚಿಟಗುಪ್ಪಿ ಆಸ್ಪತ್ರೆ ನವೀಕೃತಗೊಳಿಸಲಾಗುವುದು, ಕಾಮಗಾರಿಯಲ್ಲಿ ಒಂದನೇ ಮಹಡಿ ಕಟ್ಟಡ ಹಾಗೂ ಆಡಳಿತ ವಿಭಾಗದ ನಾಲ್ಕು ಕಟ್ಟಡಗಳನ್ನು ಹೊಸದಾಗಿ ನಿರ್ಮಿಸಲಾಗುವುದು.

20.26 ಕೋಟಿ ವೆಚ್ಚದಲ್ಲಿ ನಗರದ ನೆಹರು ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು,ಈ ಕಾಮಗಾರಿಯಲ್ಲಿ ಜಿ+2 ಕಟ್ಟಡ ಟೇಬಲ್ ಟೆನ್ನಿಸ್ ಕೋರ್ಟ್, ಕಾನ್ಫರೆನ್ಸ್ ಸಭಾಂಗಣದಲ್ಲಿ ಮತ್ತು ಸಾಂಸ್ಕೃತಿಕ ಭವನ, ಜಿಮ್ನಾಸ್ಟಿಕ್, ಕ್ರೀಡಾಂಗಣ ಕಟ್ಟಡ ಕಾಮಗಾರಿಗಳನ್ನು ಆಯೋಜಿಸಲಾಗಿದೆ.

5.08 ಕಿ.ಮೀ ಮುಖ್ಯ ರಸ್ತೆಯ ಒಟ್ಟು 50.75 ಕೋಟಿ ವೆಚ್ಚದಲ್ಲಿ ರೈಲೈ ಸ್ಟೇಷನ್ ರಸ್ತೆಯ ಸ್ಮಾರ್ಟ ರಸ್ತೆ ಪ್ಯಾಕೇಜ್ -02ರ ಅಭಿವೃದ್ಧಿ ಕಾಮಗಾರಿಯನ್ನು ಹೊಂದಲಾಗಿದೆ. ಇವುಗಳಲ್ಲಿ ಕ್ರೀಡಾಂಗಣದ ಸುತ್ತಲಿನ ಜೆಸಿ ನಗರ ರಸ್ತೆ ಕೊಪ್ಪಿಕರ, ಕೋಯಿನ್ ರಸ್ತೆ, ವಿಕ್ಟೋರಿಯಾ, ಬ್ರಾಡ್‌ವೇ, ಮರಾಠಗಲ್ಲಿ ಸೇರಿದಂತೆ ಸಿಬಿಟಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಒಳಗೊಂಡಿದೆ.

ಗಣೇಶ ಪೇಟೆಯ ಮೀನು ಮಾರುಕಟ್ಟೆಯನ್ನು ಬೇಸ್ಮೆಂಟ್, ಗ್ರೌಂಡ್ ಫ್ಲೋರ್ ಹಾಗೂ ಮೆಜ್ ನೈನ್ ಫ್ಲೋರ್ ಮಹಡಿಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಈ ಕಾಮಗಾರಿಗಾಗಿ ರೂ.5.38 ಕೋಟಿ ಹೊಂದಲಾಗಿದೆ. ರೂ.4.60 ಕೋಟಿ ವೆಚ್ಚದಲ್ಲಿ  ಮೇದಾರ ಓಣಿಯ ಪಾರ್ಕಿಂಗ್ ಹಾಗೂ ಡಿಸ್ಪೆನ್ಸರಿ ಕಾಮಗಾರಿ ಕೈಗೊಳ್ಳಲಾಗುವುದು.


Spread the love

Leave a Reply

Your email address will not be published. Required fields are marked *