“ಪಾಕ್ ಲಿಂಕ್’ ಶೇರ್: 2008 ಬ್ಯಾಚಿನ ಸನಾವುಲ್ಲಾ ಸಸ್ಪೆಂಡ್
ದಾವಣಗೆರೆ: ನಗರದ ಬಸವನಗರ ಠಾಣೆಯ ಪೊಲೀಸ್ ಚಾಲಕನಾಗಿದ್ದ ಸನಾವುಲ್ಲಾ ಮಾಡಿದ ಯಡವಟ್ಟಿನಿಂದ ಅಮಾನತ್ತಿಗೆ ಒಳಗಾಗಿದ್ದಾನೆ. ಪವರ್ ಆಪ್ ಪಾಕಿಸ್ತಾನ ಪೇಜ್ ನ್ನ ಲೈಕ ಮಾಡಿ ಅದನ್ನೇ ಶೇರ್ ಮಾಡಿದ್ದರಿಂದ ಪಾಕ್ ಪ್ರೇಮಿ ಪೊಲೀಸ್ ಸಸ್ಪಂಡ್ ಆಗಿದ್ದಾನೆ.
ಮೂಲತಃ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದ ಸನಾವುಲ್ಲಾ 2008ರ ಬ್ಯಾಚ್ ಹೆಸರಿನ ಗ್ರೂಫನಲ್ಲಿ ಎಫ್ ಪೇಜ್ ಲಿಂಕನ್ನ ಶೇರ್ ಮಾಡಿದ್ದಾನೆ. ಈ ವಿವಾದಿತ ಫೇಸ್ ಬುಕ್ ಲಿಂಕ್ ಹರದಾಡುತ್ತಿದಂತೆ ಎಚ್ಚೆತ್ತ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ಮೂಲಕ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿಯನ್ನ ನೀಡಿದ್ದು, ಪೊಲೀಸ್ ವರಿಷ್ಠಾಧಿಕಾರಿ ಹನಮಂತರಾಯ, ಸನಾವುಲ್ಲಾನನ್ನ ಅಮಾನತ್ತು ಮಾಡಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.