ಬೆಳ್ಳಂಬೆಳಿಗ್ಗೆ ಸ್ವಾಮಿ ಕೊಲೆ: ಆರೋಪಿ ಹಿಡಿದು ಪಬ್ಲಿಕ್ ಏನು ಮಾಡಿದ್ದಾರೆ ಗೊತ್ತಾ…?
ರಾಯಚೂರು: ಅರಳಿಗಿಡದ ಕೆಳಗಿನ ನಾಗರ ಪೂಜೆ ಮಾಡುತ್ತಿದ್ದ ಸಮಯದಲ್ಲೇ ವ್ಯಕ್ತಿಯೋರ್ವ ಸ್ವಾಮೀಯೋರ್ವರನ್ನ ಅಮಾನುಷವಾಗಿ ಹತ್ಯೆಗೈದ ಘಟನೆ ತಾಲೂಕಿನ ಪುಚ್ಚಲದಿನ್ನಿ ಗ್ರಾಮದಲ್ಲಿ ಸಂಭವಿಸಿದೆ.
ನಂದಯ್ಯ ಸ್ವಾಮಿ ಅನ್ನೋರು ಬೆಳಗಿನ ಜಾವದ ಸಮಯದಲ್ಲಿ ನಾಗಪೂಜೆ ಮಾಡುತ್ತಿದ್ದ ವೇಳೆಯಲ್ಲಿ ಹರಿತವಾದ ಆಯುಧದಿಂದ ಸಿಕ್ಕಸಿಕ್ಕಲೇ ಹೊಡೆದು ಕೊಲೆ ಮಾಡಿದ್ದಾನೆ. ನಂದಯ್ಯ ಸ್ವಾಮಿಯ ಪಕ್ಕದ ಮನೆಯ ಚೆನ್ನಬಸಯ್ಯ ಸ್ವಾಮಿ ಎಂಬಾತನೇ ಕೊಲೆ ಮಾಡಿದ್ದು.
ಕೊಲೆ ನಡೆದ ಕೆಲವೇ ನಿಮಿಷಗಳಲ್ಲಿ ಆರೋಪಿಯನ್ನ ಸ್ಥಳೀಯರು ಹಿಡಿದು ಪಕ್ಕದಲ್ಲಿದ್ದ ಗಿಡಕ್ಕೆ ಕಟ್ಟಿ ಹಾಕಿದ್ದರು. ಹತ್ಯೆಯ ಮಾಹಿತಿ ಪಡೆದ ಇಡಪನೂರು ಠಾಣೆಯ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.
ಪುಚ್ಚಲದಿನ್ನಿ ಗ್ರಾಮದಲ್ಲಿ ನಡೆದ ಕೊಲೆಯಿಂದ ಇಡೀ ಗ್ರಾಮವೇ ಬೆದರಿದ್ದು, ಸ್ವಾಮಿಯ ಸಾವಿಗೆ ಮರಗುತ್ತಿದ್ದಾರೆ.