Posts Slider

Karnataka Voice

Latest Kannada News

ಬಿಇಓ ಹುದ್ದೆ ಮಂಜೂರಿಗೆ ಶಿಕ್ಷಕರೇ ಕೇಳುವ ಸ್ಥಿತಿ: ಸರಕಾರಕ್ಕೆ ಪತ್ರ ಬರೆದ ಗ್ರಾಮೀಣ ಸಂಘ

Spread the love

ಹುಬ್ಬಳ್ಳಿ: ರಾಜ್ಯದಲ್ಲಿ ಹೊಸದಾಗಿ ಮಂಜೂರಾಗಿರುವ ತಾಲೂಕುಗಳಿಗೆ ಶೀಘ್ರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆಯನ್ನ ಮಂಜೂರು ಮಾಡುವಂತೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನ ಒತ್ತಾಯಿಸಿದೆ.

ಈ ಬಗ್ಗೆ ಸಿಎಂ ಅವರಿಗೆ ಪತ್ರ ಬರೆದಿರುವ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, 49 ತಾಲೂಕುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಾಗಬೇಕಾದರೇ ನೂತನ ಬಿಇಓ ಅವಶ್ಯಕವಾಗಿದೆ. ಈ ಬಗ್ಗೆ ತಕ್ಷಣವೇ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇಮಕ ಮಾಡುವ ಮೂಲಕ ಆಡಳಿತಾತ್ಮಕವಾಗಿಯೂ ಮತ್ತೂ ಶೈಕ್ಷಣಿಕವಾಗಿಯೂ ಸುಲಲಿತವಾಗಿ ನಡೆಯುವಂತೆ ಮಾಡಬೇಕೆಂದು ಅಶೋಕ ಸಜ್ಜನ ಕೋರಿದ್ದಾರೆ.


Spread the love

Leave a Reply

Your email address will not be published. Required fields are marked *