ಇಂದು ಸಿಎಂ ಅಲ್ಲಿ ಹೋಗಲೇಬೇಕಿತ್ತು..! ಇಲ್ಲದಿದ್ದರೇ ನಮ್ಮ ಜನ..!
1 min readವಿಜಯಪುರ: ರಾಜಕಾರಣಿಗಳು ಕೂಡಾ ಉತ್ತರ ಕರ್ನಾಟಕವನ್ನ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದಾರೆಂಬ ಕೂಗು ಮೊದಲಿನಿಂದ ಬರುತ್ತಲೇ ಇದೆ. ಆದ್ರೇ, ಇತ್ತೀಚೆಗೆ ಕಾವೇರಿ ನದಿಗೆ ಬಾಗೀನ ಅರ್ಪಿಸಿದ ನಂತರ ಮತ್ತಷ್ಟು ಈ ಭಾಗದ ಜನರು ರೋಸಿ ಹೋಗಿದ್ದರು.
ಸಿಎಂ ಯಡಿಯೂರಪ್ಪ ಎಲ್ಲ ಭಾಗದವರನ್ನೂ ಒಂದೇ ರೀತಿಯಲ್ಲಿ ನೋಡಿಕೊಳ್ಳುತ್ತಾರೆ ಎಂಬುದಕ್ಕೆ ಪುಷ್ಠಿ ನೀಡುವಂತೇ ಇಂದು ನಡೆದುಕೊಂಡರು. ಬೆಳಗಾವಿಯ ವಿಶೇಷ ಸಭೆಯ ನಂತರ ಹಾನಿಯಾಗಿರುವ ಪ್ರದೇಶಗಳನ್ನ ವೈಮಾನಿಕ ಸಮೀಕ್ಷೆ ನಡೆಸಿ, ಸೀದಾ ಹೋಗಿದ್ದು ಆಲಮಟ್ಟಿ ಜಲಾಶಯಕ್ಕೆ.
ತುಂಬಿ ತುಳುಕುತ್ತಿರುವ ಲಾಲ ಬಹದ್ದೂರ ಶಾಸ್ತ್ರೀ ಜಲಾಶಯಕ್ಕೆ ಸಿಎಂ ಯಡಿಯೂರಪ್ಪ ಬಾಗೀನ ಅರ್ಪಿಸಿದರು. ಡಿಸಿಎಂ ಗೋವಿಂದ ಕಾರಜೋಳ, ಸಚಿವ ರಮೇಶ ಜಾರಕಿಹೊಳಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಎಸ್.ಆರ್.ಪಾಟೀಲ, ಆರ್.ಅಶೋಕ, ಶಿವಕುಮಾರ ಉದಾಸಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಾಗೀನ ಅರ್ಪಿಸಿದ ನಂತರ ಸಿಎಂ ಬಿ.ಎಸ್.ಯಡಿಯೂರಪ್ಪ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಸಚಿವರು, ಶಾಸಕರು, ಅಧಿಕಾರಿಗಳು ಹಾಗು ಜನಪ್ರತಿನಿಧಿಗಳೊಂದಿಗೆ ಮಳೆ ಹಾನಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.