ದುಡ್ಡು ಮಾಡಲು ಅವಕಾಶ ಬೇಕು- ಪಕ್ಷ ಬೇಕು- ಬಿಜೆಪಿ ಅದನ್ನ ಮಾಡುತ್ತಿದೆ: ಅಣ್ಣಾಮಲೈ ಇಂದಿನ ಮಾತು ವೈರಲ್
ನವದೆಹಲಿ: ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಐಪಿಎಸ್ ಅಧಿಕಾರಿ ಮೊದಲ ದಿನವೇ ಯಡವಟ್ಟು ಮಾಡಿಕೊಂಡಿದ್ದು, ಖಾಸಗಿ ನ್ಯೂಸ್ ಚಾನಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುವಾಗ ದುಡ್ಡು ಮಾಡಲು ಅವಕಾಶ ಬೇಕು ಮತ್ತು ಅದಕ್ಕೊಂದು ಪಕ್ಷ ಬೇಕು ಎಂದಿದ್ದಾರೆ.
ಜೆ.ಪಿ.ನಡ್ಡಾ ಉಪಸ್ಥಿತಿಯಲ್ಲಿ ಪಕ್ಷವನ್ನ ಸೇರಿದ ನಂತರ ಹಲವು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆಯಲ್ಲಿ ಮಾಜಿ ಐಪಿಎಸ್ ಹಾಲಿ ಬಿಜೆಪಿ ಪ್ರಮುಖ ಅಣ್ಣಾಮಲೈ, ಪಕ್ಷದ ಬಗ್ಗೆ ಹೇಳುವಾಗ ಇಂತಹ ಮಾತುಗಳನ್ನಾಡಿದ್ದಾರೆ.
ಅಣ್ಣಾಮಲೈ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅಣ್ಣಾಮಲೈ ಬಗ್ಗೆ ಬೇರೆ ಬೇರೆ ಥರದಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಕರ್ನಾಟಕದ ಬಹುತೇಕರಿಗೆ ತಮ್ಮ ಕರ್ತವ್ಯದಿಂದಲೇ ಪರಿಚಯವಾಗಿದ್ದ ಅಣ್ಣಾಮಲೈ ಇಂದು ಮೊದಲ ದಿನವೇ ರಾಜಕೀಯ ದಾಳಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವ ರೀತಿಯಲ್ಲಿ ವೀಡಿಯೋ ವೈರಲ್ ಆಗಿದೆ.