ಪ್ರೂಟ್ ಇರ್ಫಾನ್ ಹತ್ಯೆ: ಬಾಂಬೆ ಶೂಟರ್ಸ್ ಬಂಧನ- ಎಕ್ಸಕ್ಲೂಸಿವ್ ಮಾಹಿತಿ
ಹುಬ್ಬಳ್ಳಿ: ಮುಂಡಗೋಡ ಮೂಲದ ಇರ್ಫಾನ್ ಹಂಚಿನಾಳ ಅಲಿಯಾಸ್ ಪ್ರೂಟ್ ಇರ್ಫಾನ್ ಹತ್ಯೆ ಮಾಡಿ ಪರಾರಿಯಾಗಿದ್ದ ಬಾಂಬೆ ಮೂಲದ ಶೂಟರ್ಸ್ ಗಳನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳನ್ನ ಹುಬ್ಬಳ್ಳಿಯತ್ತ ಕರೆತರಲಾಗುತ್ತಿದೆ ಎಂದು ಖಚಿತ ಮೂಲಗಳು ತಿಳಿಸಿವೆ.
ಆಗಸ್ಟ್ ಮೊದಲ ವಾರದಲ್ಲಿ ಮಗನ ವಲೀಮಾ ಮುಗಿಸಿ ಬೀಗರನ್ನ ಕಳಿಸಲು ಹೊರಗೆ ನಿಂತಿದ್ದ ಪ್ರೂಟ್ ಇರ್ಫಾನ್ ಮೇಲೆ ಗುಂಡಿನ ಸುರಿಮಳೆಗೈದಿದ್ದ ಮೂವರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರೂಟ್ ಇರ್ಫಾನ್ ಹತ್ಯೆಯ ಬಗ್ಗೆ ಜಾಡು ಹಿಡಿದು ಕಾರ್ಯನಿರ್ವಹಿಸುತ್ತಿದ್ದ ಪೊಲೀಸರು, ಹಲವು ವಿಧಾನಗಳಲ್ಲಿ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದರು. ಮೊದಲು ಹುಬ್ಬಳ್ಳಿ-ಧಾರವಾಡದ ಐವರನ್ನ ಬಂಧನ ಮಾಡಲಾಯಿತು. ಇದಾದ ಮೇಲೆ ಮೈಸೂರಿನ ಇಬ್ಬರನ್ನ ಬಂಧನ ಮಾಡಲಾಯಿತಾದರೂ, ಪ್ರಮುಖವಾದ ಶಾರ್ಪ್ ಶೂಟರ್ಸ್ ಗಳ ಪತ್ತೆ ಮಾತ್ರ ಆಗಿರಲೇ ಇಲ್ಲ. ಹಾಗಾಗಿಯೇ ಇಲಾಖೆ ಸಾಕಷ್ಟು ತಲೆ ಕೆಡಿಸಿಕೊಂಡಿತ್ತು.
ಪ್ರಮುಖವಾದ ಸಾಕ್ಷ್ಯ ದೊರೆತದ್ದು ಹುಬ್ಬಳ್ಳಿ ಪೊಲೀಸರಿಗೆ ಆರೋಪಿಗಳ ದಾರಿಯನ್ನ ತೋರಿಸಿದೆ. ಹಾಗಾಗಿಯೇ ಬಾಂಬೆಯ ಚೆಂಬೂರ, ವಾಡ್ಲಾ ಹಾಗೂ ಘಾಡಕೋಫರ್ ಪ್ರದೇಶದ ಶೂಟರ್ಸ್ ಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ಹಣಕ್ಕಾಗಿಯೇ ಈ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಕೊಲೆಗೆ ಸುಫಾರಿ ನೀಡಿದವ ಮತ್ತು ಕೊಲೆಪಾತಕರ ನಡುವಿದ್ದ ವ್ಯಕ್ತಿಯಾದ ರಾಜೇಂದ್ರ ಮೋಹನಸಿಂಗ್ ರಾವುತ್ ಅಲಿಯಾಸ್ ರಾಜು ನೇಪಾಳಿ ನೀಡಿದ ಮಾಹಿತಿಯೇ ಪೊಲೀಸರು ಆರೋಪಿಗಳನ್ನ ತಲುಪಲು ಸಾಧ್ಯವಾಗಿದೆ. ಅತ್ಯುತ್ತಮ ತನಿಖೆ ಮಾಡಿದ ತಂಡ, ಆರೋಪಿಗಳ ಸಮೇತ ಚೋಟಾ ಮುಂಬೈನತ್ತ ಹೆಜ್ಜೆ ಹಾಕಿದ್ದು, ಮಹತ್ವದ ಕೇಸ್ ಹೊರಗೆ ಬಂದಿದೆ.