ಸಿಂಧನೂರು: ಜಗಳ ಬಿಡಿಸಲು ಹೋದವರೇ ಆಸ್ಪತ್ರೆ ಸೇರಿದ್ದು ಎಲ್ಲಿ ಗೊತ್ತಾ..!
ರಾಯಚೂರು: ಗಣಪತಿ ವಿಸರ್ಜನೆ ವೇಳೆ ಯುವಕರ ನಡುವೆ ನಡೆದ ಗಲಾಟೆಯನ್ನ ತಡೆಯಲು ಹೋದ ಹಿರಿಯರೇ ಗಲಾಟೆ ಮಾಡಿಕೊಂಡು ಆಸ್ಪತ್ರೆ ಸೇರಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ಎಲೆಕೂಡ್ಲಿಗಿ ಗ್ರಾಮದಲ್ಲಿ ಸಂಭವಿಸಿದೆ.
ಗಣಪತಿ ವಿಸರ್ಜನೆ ವೇಳೆ ಯುವಕರ ಗಲಾಟೆಯಾಗಿದ್ದರಿಂದ ದೂರು ನೀಡಲು ಒಂದು ಕೋಮಿನ ಯುವಕರು ಮುಂದಾಗಿದ್ದರು. ದೂರು ನೀಡುವುದನ್ನು ಗ್ರಾಮದ ಹಿರಿಯರು ತಡೆದು, ಹಿರಿಯರ ಸಮ್ಮುಖದಲ್ಲಿ ಬಗೆಹರಿಸುವ ಪ್ರಯತ್ನ ಮಾಡಿದ್ದರು. ಆದರೆ, ಕಿರಿಯರು ಹಿರಿಯರೊಂದಿಗೆ ವಾಗ್ವಾದಕ್ಕೆ ಇಳಿದರು. ಇದೇ ಸಮಯದಲ್ಲಿ ಮಹಿಳೆಯರು ಬಂದಿದ್ದರಿಂದ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಹಿರಿಯರು ಕಾದಾಟಕ್ಕೆ ಇಳಿದ ಪರಿಣಾಮ ಮೂವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಓರ್ವನಿಗೆ ಗಂಭೀರ ಗಾಯವಾಗಿದೆ. ಆತನನ್ನ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪೊಲೀಸ್ ಠಾಣೆ ಬೇಡ ಅಂದವರು ಕೂಡಾ ಇದೀಗ ತುರುವಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.