ಪರಿಸರ ಸ್ನೇಹಿ ಧಾರವಾಡ ಪೊಲೀಸರು: ಬ್ಯಾರಲ್ ನಲ್ಲೇ ಗಣೇಶ ವಿಸರ್ಜನೆ
ಧಾರವಾಡ: ಕೊರೋನಾ ಸಮಯದಲ್ಲಿ ಯಾವುದೇ ಆಡಂಬರಕ್ಕೆ ಅವಕಾಶ ಕೊಡದಂತೆ ನಡೆದುಕೊಂಡ ಧಾರವಾಡ ಸಂಚಾರಿ ಠಾಣೆ ಪೊಲೀಸರು ಪರಿಸರ ಸ್ನೇಹಿಯಾಗಿ ನಡೆದುಕೊಂಡಿದ್ದು, ಗಣೇಶ ವಿಸರ್ಜನೆಯನ್ನ ಠಾಣೆಯಲ್ಲೇ ಮಾಡಿ, ಎಲ್ಲರ ಮನಸ್ಸನ್ನ ಗೆದ್ದಿದ್ದಾರೆ.
ಕೊರೋನಾ ಹಾವಳಿಯಿಂದ ತತ್ತರಿಸಿರುವ ದೇಶದಲ್ಲಿ ಯಾವುದೇ ರೀತಿಯ ಆಡಂಬರಕ್ಕೆ ಅವಕಾಶ ಮಾಡಿಕೊಡಬಾರದೆಂಬ ಆದೇಶವನ್ನ ಸರಕಾರ ನೀಡಿದ್ದನ್ನ ಸಂಚಾರಿ ಠಾಣೆಯ ಪೊಲೀಸರು ಚಾಚುತಪ್ಪದೇ ಪಾಲಿಸಿದ್ದಾರೆ.
ಠಾಣೆಯಲ್ಲಿಟ್ಟಿದ್ದ ಶ್ರೀ ಗಣೇಶನಿಗೆ ವಿಶೇಷ ಪೂಜೆ-ಪುನಸ್ಕಾರ ಸಲ್ಲಿಸಿದ ನಂತರ ಠಾಣೆಯ ಮುಂಭಾಗದಲ್ಲೇ “ಗಣಪತಿ ಬಪ್ಪಾ ಮೊರಯಾ’ ಎನ್ನುತ್ತ ವಿಸರ್ಜನೆ ಮಾಡಿದರು.
ಪರಿಸರ ಕಾಳಜಿಯನ್ನ ಹೊಂದಿರುವ ಇನ್ಸ್ ಪೆಕ್ಟರ್ ಮಲ್ಲನಗೌಡ ನಾಯ್ಕರ, ಮಣ್ಣಿನ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ್ದರು. ಅದೇ ಕಾರಣಕ್ಕೆ ಯಾವುದೇ ರೀತಿಯಲ್ಲಿ ಪರಿಸರಕ್ಕೆ ನಾಶವಾಗುವ ನಿರ್ಣಯ ತೆಗೆದುಕೊಳ್ಳದೇ, ಠಾಣೆಯ ಮುಂಭಾಗದಲ್ಲೇ ಗಣಪತಿಯ ವಿಸರ್ಜನೆ ಮಾಡಿಸಿದರು.
ಠಾಣೆಯ ಬಹುತೇಕ ಸಿಬ್ಬಂದಿಗಳು ವಿಸರ್ಜನೆ ಸಮಯದಲ್ಲಿ ಹಾಜರಿದ್ದು, ಶ್ರೀ ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿದರು.