Posts Slider

Karnataka Voice

Latest Kannada News

ಗೃಹ ಸಚಿವರ ತಮ್ಮ..? ಲೀಗಲ್ ಅಡ್ವೈಸರ್..? ಅರೆಸ್ಟ್: ಬೊಮ್ಮಾಯಿಯವರೇ ವಿಷಯ ಗೊತ್ತಾಯ್ತಾ..

1 min read
Spread the love

ಚಿಕ್ಕಬಳ್ಳಾಪುರ: ತಾನು ಗೃಹ ಸಚಿವರ ಸಹೋದರನೆಂದು ಮತ್ತೋಬ್ಬ ನಾನೂ ಗೃಹ ಸಚಿವರ ಕಾನೂನು ಸಲಹೆಗಾರನೆಂದು ಪೊಲೀಸರನ್ನೇ ಯಾಮಾರಿಸಲು ಪ್ರಯತ್ನಿಸಿದ್ದ ಇಬ್ಬರನ್ನ ಪೊಲೀಸರಿಗೆ ಹೆಡಮುರಿಗೆ ಕಟ್ಟಿ ಬಂಧನ ಮಾಡಿರುವ ಘಟನೆ ಮಂಚೇನಹಳ್ಳಿಯಲ್ಲಿ ನಡೆದಿದೆ.

ಪೊಲೀಸರನ್ನೇ ಯಮಾರಿಸಲು ಹೋಗಿದ್ದ ನಕಲಿ ವ್ಯಕ್ತಿಗಳು ಜೈಲುಪಾಲಾಗಿದ್ದಾರೆ. ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪಿಎಸೈ ಲಕ್ಷ್ಮೀನಾರಾಯಣಗೆ ಕಾಲ್ ಮಾಡಿದ್ದ ಬಸವರಾಜ, ತಾನು ಗೃಹ ಸಚಿವರ ಸಹೋದರ ಎಂದು ಹೇಳಿದ್ದ.

ದೊಡ್ಡಬಳ್ಳಾಪುರ ತಾಲ್ಲೂಕಿನ ಟಿ ಎಸ್ ಬಸವರಾಜು, ತಮ್ಮ ಸಂಬಂಧಿ ರವಿಪ್ರಕಾಶ್ ಠಾಣೆಗೆ ಬರ್ತಾರೆ ಅವರ ಕೆಲಸ ಮಾಡಿಕೊಡಿ ಎಂದು ಪಿಎಸೈಗೆ ಹೇಳಿದ್ದ. ಈ ರವಿಪ್ರಕಾಶ ಬೇರೆ ಯಾರೂ ಅಲ್ಲ, ತರಿದಾಳು ಗ್ರಾಮದ ಸರಕಾರಿ ಶಾಲಾ ಶಿಕ್ಷಕ. ಕಾಲ್ ಮಾಡಿದ ವ್ಯಕ್ತಿಯೇ ಈತನನೊಂದಿಗೆ ಬಂದು, ತಾನು ವಕೀಲ ಗೃಹಸಚಿವರ ಕಾನೂನು ಸಲಹೆಗಾರ ಎಂದು ಹೇಳಿಕೊಂಡಿದ್ದ.

ಅನುಮಾನಗೊಂಡು ಪೊಲೀಸರು ತಮ್ಮದೇ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಇವರಿಬ್ಬರೂ ನಕಲಿಗಳು ಎಂದು ಗೊತ್ತಾಗಿದ್ದು, ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ 419  ಹಾಗೂ 420 ಅಡಿ ಪ್ರಕರಣ ದಾಖಲು ಮಾಡಿ ಇಬ್ಬರನ್ನೂ ಜೈಲಿಗೆ ನೂಕಲಾಗಿದೆ.


Spread the love

Leave a Reply

Your email address will not be published. Required fields are marked *

You may have missed