Exclusive ಧಾರವಾಡ ಬಳಿ “ಭೀಕರ” ಅಪಘಾತ: ಕಾರಲ್ಲಿದ್ದ ಐವರು ಏನಾಗಿದ್ದಾರೆ ಗೊತ್ತಾ..! ಸ್ಥಳದಲ್ಲಿದ್ದಾರೆ ಪೊಲೀಸರು..
ಧಾರವಾಡ: ನಗರದಿಂದ ದಾಂಡೇಲಿಗೆ ಹೋಗುವ ರಸ್ತೆಯಲ್ಲಿ ಇಂದು ಮತ್ತೊಂದು ರಸ್ತೆ ಅಪಘಾತ ಸಂಭವಿಸಿದೆ. ಕ್ಯಾಂಟರ್ ವಾಹನ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಆಳಕ್ಕೆ ಬಿದ್ದಿದ್ದು, ಐವರು ಪ್ರಾಣಾಪಾಯದಿಂದ ಪಾರಾದ ಘಟನೆ ಕೆಲ ಗಂಟೆಗಳ ಹಿಂದೆ ನಡೆದಿದೆ.
ವಾಹನಗಳ ಡಿಕ್ಕಿಯಾದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಐವರಿಗೆ ತೀವ್ರ ಗಾಯಗಳಾಗಿದ್ದು, ಪ್ರಾಣಕ್ಕೆ ಯಾವುದೇ ಥರದ ಹಾನಿಯಾಗಿಲ್ಲ. ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ನೀಡಿ, ಆಳದಲ್ಲಿ ಬಿದ್ದಿದ್ದ ಕಾರನ್ನ ಹಿಟ್ಯಾಚಿಯಿಂದ ಮೇಲಕ್ಕೆ ಎತ್ತಿದ್ದರು. ರಸ್ತೆ ಸಂಚಾರಕ್ಕೆ ಅನಾನುಕೂಲವಾಗಿದ್ದ ಕ್ಯಾಂಟರನ್ನು ಕೂಡಾ ಸರಿದಾರಿಗೆ ನಿಲ್ಲಿಸಿದ್ದಾರೆ.
ಸಂತೋಷ ಲಾಡ ಸಚಿವರಾಗಿದ್ದಾಗ ಧಾರವಾಡದಿಂದ ದಾಂಡೇಲಿಗೆ ಹೋಗುವ ರಸ್ತೆಯನ್ನ ಅಭಿವೃದ್ಧಿ ಮಾಡುವ ಆಲೋಚನೆ ಮಾಡಿದ್ದರು. ಕಳೆದ ಬಾರಿ ಅವರು ಪರಾಭವಗೊಂಡಿದ್ದರಿಂದ ಹಾಲಿ ಶಾಸಕರು ಈ ಬಗ್ಗೆ ಯಾವುದೇ ರೀತಿಯ ಕ್ರಮವನ್ನ ಜರುಗಿಸುತ್ತಿಲ್ಲ.
ರಸ್ತೆ ಅಗಲೀಕರಣವಾಗದ ಹೊರತು ಇಲ್ಲಿ ಅಪಘಾತ ನಿಯಂತ್ರಣ ಕಷ್ಟಸಾಧ್ಯವಾಗಿದೆ. ವಾರಕ್ಕೆ ಒಂದಾದರೂ ಈ ಭಾಗದಲ್ಲಿ ಅಪಘಾತಗಳು ನಡೆಯುತ್ತಲೇ ಇವೆ. ಈಗಲಾದರೂ ಶಾಸಕ ಸಿ.ಎಂ.ನಿಂಬಣ್ಣನವರ ರಸ್ತೆಯ ಬಗ್ಗೆ ಚಿಂತನೆ ಮಾಡಬೇಕಿದೆ.