ಸಿದ್ಧರಾಮಯ್ಯ ಸರಕಾರವಿದ್ದಿದ್ರೇ ಜನ ಮಣ್ಣು ತಿನ್ನುತ್ತಿದ್ರೇನೋ: ಬಸವರಾಜ ಬೊಮ್ಮಾಯಿ
ಹಾವೇರಿ: ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರವಿದೆ. ಸಿದ್ದರಾಮಯ್ಯ ಸರಕಾರವಿದ್ದರೆ ಜನರು ಮಣ್ಣು ತಿನ್ನುತ್ತಿದ್ದರೇನೋ. ನಮ್ಮ ಸರಕಾರದಲ್ಲಿ ಅಂಥಾದ್ದು ಯಾವುದೂ ಆಗೋದಿಲ್ಲ ಎನ್ನುವ ಮೂಲಕ ಕೇಂದ್ರ ಜಿಎಸ್ಟಿ ಹಣ ಕೊಡದಿದ್ರೆ ಜನರು ಮಣ್ಣು ತಿನ್ನಬೇಕಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ರು.
ನಗರದಲ್ಲಿಂದು ಮಾತನಾಡಿದ ಸಚಿವ ಬೊಮ್ಮಾಯಿ, ದೇಶಕ್ಕೆ ಕೊರೋನಾ ಬಂದಿದ್ದರಿಂದ ರಾಜ್ಯ ಮತ್ತು ಕೇಂದ್ರ ಸರಕಾರದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಇಂಥಾ ಸಂದರ್ಭದಲ್ಲಿ ರಾಜ್ಯಕ್ಕೆ ತೊಂದ್ರೆ ಆಗಬಾರ್ದು ಅನ್ನೋ ಕಾರಣಕ್ಕೆ ಚರ್ಚೆ ಮಾಡಿದ್ದೇವೆ. ಅದು ಒಂದು ಹಂತಕ್ಕೆ ಬಂದಿದೆ ಎಂದರು.
ರಾಜ್ಯಕ್ಕೆ ಬಡ್ಡಿ ಮತ್ತು ಅಸಲು ಭಾರ ಆಗೋದಿಲ್ಲ. ರಾಜ್ಯಕ್ಕೆ ಭಾರ ಆಗದಿರೋ ವ್ಯವಸ್ಥೆಯನ್ನ ಕೇಂದ್ರ ಸರಕಾರ ಸೂಚಿಸಿದೆ. ಇವತ್ತು ಅಥವಾ ನಾಳೆ ಅದು ಲಿಖಿತ ರೂಪದಲ್ಲಿ ಬರುತ್ತದೆ. ಲಿಖಿತ ರೂಪದಲ್ಲಿ ಬಂದ ನಂತರ ಸ್ಪಷ್ಟವಾದ ಅಭಿಪ್ರಾಯ ತಿಳಿಸುತ್ತೇವೆ. ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲವೂ ಒಟ್ಟಾಗಿ ಚರ್ಚಿಸಲಾಗಿದೆ. ಸಿದ್ದರಾಮಯ್ಯ ಮುತ್ಸದ್ದಿ ರಾಜಕಾರಣಿ. ಅತಿ ಹೆಚ್ಚು ಬಜೆಟ್ ಮಂಡಿಸಿದ್ದಾರೆ. ಇದನ್ನ ಬಗೆಹರಿಸಲು ಪರಿಹಾರ ಹೇಳಬೇಕು. ಸಿದ್ದರಾಮಯ್ಯ ಇದರಲ್ಲಿ ರಾಜಕಾರಣ ಮಾಡಬಾರ್ದು ಎಂದು ಬೊಮ್ಮಾಯಿ ಹೇಳಿದರು.
