ರಾಜ್ಯದಲ್ಲಿಂದು 8324 ಪಾಸಿಟಿವ್: 8110 ಗುಣಮುಖ- 115 ಸೋಂಕಿತರ ಸಾವು
ರಾಜ್ಯದಲ್ಲಿ ಇಂದು ಮತ್ತೆ 8324 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 8110 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ರಾಜ್ಯದಲ್ಲಿ 115 ಸೋಂಕಿತರು ಸಾವಿಗೀಡಾಗುವ ಮೂಲಕ ಕೊರೋನಾ ವೈರಸ್‌ನಿಂದ 5483 ಸೋಂಕಿತರು ಸಾವಿಗೀಡಾದಂತಾಗಿದೆ.
ರಾಜ್ಯದಲ್ಲಿ ಇಲ್ಲಿಯವರೆಗೆ 327076 ಪಾಸಿಟಿವ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿಯವರೆಗೆ 235128 ಸೋಂಕಿತರು ಗುಣಮುಖರಾಗಿ ಮನೆ ಸೇರಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ 86446 ಸಕ್ರಿಯ ಪ್ರಕರಣಗಳಾಗಿವೆ.
ಬೆಂಗಳೂರು ಒಂದರಲ್ಲೇ 37315 ಸಕ್ರಿಯ ಪ್ರಕರಣಗಳಿದ್ದು, ರಾಜಧಾನಿಯೊಂದರಲ್ಲೇ 85215 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.