ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ತಪ್ಪಿತು ಭಾರೀ ಅನಾಹುತ- ಕೋರ್ಟ್ ವೃತ್ತದಲ್ಲಿ ಆತ ಬದುಕಿದ್ದೇ..!
ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಬೆಳ್ಳಂಬೆಳಿಗ್ಗೆ ಭಾರೀ ಅನಾಹುತವೊಂದು ತಪ್ಪಿದ್ದು, ಗಾಬರಿಯಾಗುವಂತ ಅವಘಡ ತಪ್ಪಿದಂತಾಗಿದೆ. ವಾಣಿಜ್ಯ ಸರಕುಗಳನ್ನ ಗುಂಬಿದ್ದ ಲಾರಿಯೊಂದು ಕೋರ್ಟ್ ವೃತ್ತದಲ್ಲಿ ಮಗುಚಿ ಬಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಗರದೊಳಗೆ ಬರುತ್ತಿದ್ದ ಸರಕು ತುಂಬಿದ್ದ ಲಾರಿ ಕೋರ್ಟ್ ವೃತ್ತದ ಬಳಿ ತಿರುಗಿಸುವಾಗ ಮಗುಚಿ ಬಿದ್ದಿದೆ. ಪಕ್ಕದಲ್ಲಿಯೇ 20 ಅಡಿಯ ತೆಗ್ಗು ಕೂಡಾಯಿತ್ತು. ಆದರೆ, ತಗ್ಗಿನ ಮೇಲೆಯೇ ಬಿದ್ದರೂ ಲಾರಿಯ ಡಿಸೇಲ್ ಟ್ಯಾಂಕ್ ಒಡೆದು ಸಾಯಿಮಂದಿರದ ವರೆಗೂ ಡಿಸೇಲ್ ಹರಿದು ಹೋಗಿದೆ. ಪಕ್ಕದಲಿಯೇ ವಿದ್ಯುತ್ ಕಂಬ ಕೂಡಾ ಇತ್ತು.
ಲಾರಿ ಬಿದ್ದ ತಕ್ಷಣವೇ ಸ್ಥಳೀಯರು ಚಾಲಕನನ್ನ ಹೊರಗೆ ತೆಗೆದು ಕಿಮ್ಸ್ ಗೆ ಆಟೋದಲ್ಲಿ ಕಳಿಸಿದ್ದು, ಡಿಸೇಲ್ ಸೋರಿಕೆಯಿಂದ ಯಾವುದೇ ಅವಘಡ ಸಂಭವಿಸಬಾರದೆಂದು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ.
ಘಟನೆ ನಡೆದ ಕೆಲವೇ ಕ್ಷಣದಲ್ಲಿ ಪೂರ್ವ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಡಿಸೇಲ್ ಸೋರಿಕೆಯನ್ನ ತಡೆಯುವ ಪ್ರಯತ್ನ ಮಾಡಿದ್ರು. ಬೆಂಕಿಯ ಅವಘಡ ಸಂಭವಿಸದಂತೆ ಕ್ರಮ ಜರುಗಿಸಿದರು.
ಇಡೀ ಪ್ರಕರಣ ಕೋರ್ಟ್ ವೃತ್ತದಲ್ಲಿ ಕೆಲಕಾಲ ಆತಂಕವನ್ನ ಸೃಷ್ಟಿ ಮಾಡಿತ್ತು. ಆದರೆ, ಪೊಲೀಸರ ಕ್ರಮದಿಂದ ಎಲ್ಲವೂ ಸುಸೂತ್ರವಾಗಿ ನಡೆಯಿತು.