Posts Slider

Karnataka Voice

Latest Kannada News

ಕೆಜಿಎಫ್ ಎಫೆಕ್ಟ್ ಲಾಂಗು ಹಿಡಿದು- ಧಮ್ ಕೊಟ್ಟ ಯುವಕ: ವೀಡಿಯೋ ನೋಡಿದ್ರೇ ಬೆಚ್ಚಿಬೀಳ್ತಿರಾ..

1 min read
Spread the love

ಕೋಲಾರ: ಕುಡಿದ ಮತ್ತಿನಲ್ಲಿ ಬಾರ್ ಸಮಯ ಮುಗಿದಿದ್ದರೂ ಮದ್ಯ ನೀಡುವಂತೆ ಲಾಂಗ್ ಹಿಡಿದು ಒತ್ತಾಯಿಸಿರುವ ಯುವಕನೋರ್ವ, ಸಾರ್ವಜನಿಕ ಸ್ಥಳದಲ್ಲಿ ಬಂದವರೆಲ್ಲರನ್ನೂ ಬೆದರಿಸಿ ಪ್ರಕರಣ ಕೆಜಿಎಫ್ ಪಟ್ಟಣದ ಸಲ್ದನ್ ಬಳಿ ನಡೆದಿದೆ.

ಯುವಕನೊಬ್ಬ ಬಾರ್ ಮುಂದೆ ಲಾಂಗ್ ಹಿಡಿದು ದಾಂಧಲೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ನಗರದಲ್ಲಿ ರೌಡಿಗಳಿಗೆ ಕಡಿವಾಣ ಹಾಕಲು ಆಗುತ್ತಿಲ್ಲವೆನ್ನುವುದು ಗೊತ್ತಾಗುತ್ತಿದೆ.

ಕುಡಿದ ಮತ್ತಿನಲ್ಲಿ ಲಾಂಗ್ ಹಿಡಿದು ರಸ್ತೆಯಲ್ಲಿ ಸಾಗುತ್ತಿದ್ದ ಸಾರ್ವಜನಿಕರು ಹಾಗೂ ವಾಹನಗಳನ್ನು ಅಡ್ಡಗಟ್ಟಿ ದಾಂಧಲೆ ನಡೆಸಿದ ದುರ್ಷ್ಕಮಿಗಳು, ಅದನ್ನೇ ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ.

ಬಾರ್ ಮುಂದೆ ಲಾಂಗ್ ಹಿಡಿದು ಗಲಾಟೆ ಮಾಡುತ್ತ ಮೊಬೈಲ್ ನಲ್ಲಿ ವೀಡಿಯೋ ಮಾಡಿ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ರಸ್ತೆಯಲ್ಲಿ ಸಾಗುತ್ತಿದ್ದ ಆಟೋ ಹಾಗೂ ಬೈಕ್ ಸವಾರರಿಗೆ ಲಾಂಗ್ ತೋರಿಸಿ ಅವಾಜ್  ಹಾಕಿ ಬೆದರಿಸಿ ಭಯ ಬೀಳಿಸುವ ಪ್ರಯತ್ನವನ್ನೂ ಗ್ಯಾಂಗ್ ಮಾಡಿದ್ದು, ಪುಂಡರ ದಾಂಧಲೆಗೆ ಸಾಮಾನ್ಯ ಜನರು ಬೆಚ್ಚಿಬಿದ್ದಿದ್ದಾರೆ.

ಕಳೆದ ನಾಲ್ಕು ದಿನದ ಹಿಂದೆ ಕೆಜಿಎಫ್ ಪಟ್ಟಣದಲ್ಲಿ ಜನನಿಬಿಡಿ ಪ್ರದೇಶದಲ್ಲಿ ಯುವಕನೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಪಟ್ಟಣದಲ್ಲಿ ಇತ್ತೀಚೆಗೆ ರೌಡಿಸಂ ಮೀತಿ ಮೀರಿದ್ದು ಮಟ್ಟ ಹಾಕುವಂತೆ ಕೆಜಿಎಫ್ ಎಸ್ಪಿಗೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed