ನಂಗೆ ಕ್ಯಾನ್ಸರ್ ಆಗಿದೆ: ದುಡ್ಡಿಂದ್ ಏನೂ ಮಾಡೋಕೆ ಆಗಲ್ಲಂದ್ರು ಮುತ್ತಪ್ಪ ರೈ

ನನ್ನ ಯಾವುದೇ ಶತ್ರುವಿಗೂ ಇಂಥಹ ರೋಗ ಬರೋದು ಬೇಡ ಎನ್ನುತ್ತಲೇ ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಇವತ್ತು ಮಾತು ಆರಂಭಿಸಿದ್ದರು.
ನಾನೂ ಈಗಾಗಲೇ 68 ವರ್ಷ ಬದುಕಿದ್ದೇನೆ. ಯಾವಾಗ ಹೋದರೂ ತೊಂದರೆಯಿಲ್ಲದ ಹಾಗೇ ಕಳಿಸು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ನನ್ನ ಜೀವನವನ್ನ ಉಳಿಸು ಎಂದು ಬೇಡಿಕೊಂಡಿಲ್ಲ ಅಂದ್ರು.
300 ರೂಪಾಯಿ ಬ್ಯಾಗ್ ಎಷ್ಟು ಸಾಮಾನುಗಳನ್ನ ಹಿಡಿಯಿತ್ತೋ ಅಷ್ಟೇ ವಸ್ತುಗಳನ್ನ ಸಾವಿರಾರೂ ರೂಪಾಯಿ ಕೊಟ್ಟ ಬ್ಯಾಗ್ ಹಿಡಿಯತ್ತಷ್ಟೇ. ಕೋಟಿ ಕೊಟ್ಟ ಕಾರು ಕಡಿಮೆ ಬೆಲೆಯ ಕಾರಷ್ಟೇ ಇರತ್ತೆ. ಈ ರೋಗ ಹಣದಿಂದ ಕಡಿಮೆಯಾಗಲ್ಲ ಅನ್ನೋದು ರೈ ಹೇಳಿಕೆ.
ಮುತ್ತಪ್ಪ ಇವತ್ಯಾಕೋ ಫಿಲಾಸಫರ್ ಥರಾ ಮಾತಾಡಿದ್ರು. ಬದುಕು ಅಂದ್ರೇ ಇಷ್ಟೇ ಅಲ್ವಾ…!