“94” ಪ್ರಭು ಪುರಾಣಿಕಮಠರಿಗೆ ಶೌರ್ಯ ಪ್ರಶಸ್ತಿ…!
1 min readಅವಳಿನಗರದಲ್ಲಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿರುವ ಸಧ್ಯ ಪ್ರಭು ಪುರಾಣಿಕಮಠ ಅವರು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ..
ಹಾವೇರಿ: ಜನರ ಸೇವೆಯಲ್ಲಿಯೇ ತಮ್ಮನ್ನ ತೊಡಗಿಸಿಕೊಂಡು ಹುಟ್ಟಿದೂರನ್ನ ಮರೆಯದೇ ಬದುಕು ಕಟ್ಟಿಕೊಂಡವರನ್ನ ಗುರುತಿಸಿ ಶೌರ್ಯ ಪ್ರಶಸ್ತಿಯನ್ನ ನೀಡುವ ಕಾರ್ಯಕ್ರಮ ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಚಿಕ್ಕಮಗದೂರ ಗ್ರಾಮದಲ್ಲಿ ನಡೆಯಿತು.
ಶಟಸ್ಥಲ ಬ್ರಹ್ಮ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಭು ಪುರಾಣಿಕಮಠ ಅವರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶೌರ್ಯ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು.
ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಹಲವು ಪ್ರಕರಣಗಳ ಜಾಡನ್ನ ಹಿಡಿಯುವಲ್ಲಿ ಯಶಸ್ವಿಯಾಗಿ, ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಪ್ರಭು ಪುರಾಣಿಕಮಠರ ಕಾರ್ಯವನ್ನಸ್ವಾಮೀಜಿಗಳು ಶ್ಲಾಘಿಸಿದರು.
ಚಿಕ್ಕಮಗದೂರು ಗ್ರಾಮ ಸಣ್ಣದಾದರೂ ಉತ್ತಮ ಕಾರ್ಯಕ್ರಮ ಆಯೋಜನೆ ಮಾಡಿದೆ. ನಂದಾದೀಪ ಸ್ವಯಂ ಸೇವಾ ಸಂಸ್ಥೆ ಮತ್ತು ಕಾಳಿಕಾಂಬಾ ಮಹಿಳಾ ಮಂಡಳದ ಕಾರ್ಯ ಮೆಚ್ಚುವಂತಹದ್ದೆಂದು ಮಹಾಸ್ವಾಮೀಜಿಗಳು ನುಡಿದರು.
ಕಾರ್ಯಕ್ರಮದಲ್ಲಿ ಸೇನೆಯಲ್ಲಿದ್ದು ನಿವೃತ್ತಿ ಹೊಂದಿದವರನ್ನ ಹಾಗೂ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದವರನ್ನ ಸತ್ಕಾರ ಮಾಡಲಾಯಿತು. ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಮಹಿಳಾ ಮಂಡಳದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.