Posts Slider

Karnataka Voice

Latest Kannada News

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು

1 min read
Spread the love

ಕಲಬುರಗಿ: ಒಂದೆಡೆ ಕಲಬುರಗಿಯಲ್ಲಿ ಸುಡು ಬಿಸಿಲಿನ ಸೂರ್ಯ ತೆರೆ ಮರೆಗೆ ಸರಿಯುತ್ತಿದ್ದರೆ ಇತ್ತ ಇನ್ನೊಂದೆಡೆ …ಕನ್ನಡಾಭಿಮಾನಿಗಳ ಸಂಭ್ರಮಕ್ಕೆ ತೆರೆ ಬಿಳಲು ಕ್ಷಣಗಣನೆ ಆರಂಭವಾಗಿತ್ತು.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ನಿರ್ಣಯಗಳ ಮಂಡಣೆ ಮಾಡುತ್ತಿದ್ದಂತೆ, ಇನ್ನೆನೂ ಸಮ್ಮೇಳನ ಮುಗಿದೆ ಬಿಟ್ಟಿತಲ್ಲ ಎಂಬ ಕತ್ತಲು ಎಲ್ಲರ ಮನದಲ್ಲಿ ಕೊಂಚ ಬೇಸರವನ್ನು ಮೂಡಿಸಿದಂತಿತ್ತು.
ಮೂರು ದಿನಗಳ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಇಂದು ಸಹೃದಯಿ ಕನ್ನಡಿಗರು, ಕಲ್ಯಾಣ ಕರ್ನಾಟಕದ ಕಲಬುರಗಿಯ ಜನರ ಕಣ್ಣುಗಳು ಒದ್ದೆಯಾಗತೊಡಗಿದ್ದವು.

ಮೂರು ದಿನಗಳ ಈ ಅಭೂತಪೂರ್ವ ಸಮ್ಮೇಳನಕ್ಕೆ ಆತಿಥ್ಯ ವಹಿಸಿದ್ದ ಕಲಬುರುಗಿ ವಧುವಿನಂತೆ ಶ್ರಿಂಗಾರಗೊಂಡಿತ್ತು, ಇಲ್ಲಿನ ಹಾದಿ-ಬೀದಿಗಳೆಲ್ಲ ತಳುಕು ಬಳುಕಿನ ಬಣ್ಣಗಳ ನಡುವೆ ಮಿಂದೆದ್ದಿತ್ತು. ಏಕಾ ಎಕಿ ಮುಕ್ತಾಯ ಸಮಾರಂಭ ಆರಂಭವಾಗುತ್ತಲೆ ಅದೊಂತರದ ಜಿಗುಪ್ಸೆ ಬೇಸರ ಕವಿಗಳಲ್ಲಿ, ಜನಮಾನಸದಲ್ಲಿ ಮೂಡಿತ್ತು.

ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಭೆಯಾಗಿ ಇದು ಉಳಿದಿಲ್ಲ ಎಂಬುದಕ್ಕೆ ಈ ಅಕ್ಕರೆಯ ಸನ್ನಿವೇಶಗಳೆ ಸಾಕ್ಷಿ.
ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ದಿಗ್ಗಜ ಪ್ರೀತಿಯ ಕವಿ ಹೆಚ್.ಎಸ್.ವಿ. ಈ ಭಾಗದ ಹಿರಿಯ ಲೇಖಕಿ ಗೀತಾ ನಾಗಭೂಷಣ , ಸಾಹಿತ್ಯ ಪರಿಷತ್ ನ ಅಧ್ಯಕ್ಷ ನಾಡೋಜ ಮನು ಬಳಿಗಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಹೆಚ್.ಎಸ್.ವಿ  ಕಲಬುರಗಿಯ ಬಿಸಿಲು ತಮಗೆ ಹೊಂಬಿಸಿಲನಂತೆ ಕಂಡಿತೆ ಹೊರತು ಬರಿ ಬಿಸಿಲಾಗಲಿಲ್ಲ ಎಂದರು. ಕನ್ನಡದ ವಿಷಯ ಬಂದಾಗ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದರು. ಈ ಮೂರು ದಿನ ಕಣ್ಣಿಗೆ ಹಬ್ಬ ನೀಡಿದೆ, ಕಿವಿಗೆ ಹಬ್ಬವನ್ನ ನೀಡದೆ ನಿಮ್ಮ ಪ್ರೀತಿ ಸ್ನೇಹವನ್ನು ನಾನು ಬಯಸುತ್ತೇನೆ. ಎಂದಾಗ ಜನರ ಆತ್ಮೀಯತರ ಉದ್ಘಾರ ಕೇಕೆ ಮುಗಿಲು ಮುಟ್ಟಿಿತು.


Spread the love

Leave a Reply

Your email address will not be published. Required fields are marked *

You may have missed