ಸಾಹಿತ್ಯ ಸಮ್ಮೇಳನದಲ್ಲಿ ನಾಳೆ ವಿಜಯ ಪ್ರಕಾಶ
1 min readಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಫೆಬ್ರವರಿ 5, 6 ಮತ್ತು 7ರಂದು ಜರುಗಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ
ಫೆಬ್ರವರಿ 7 ರಂದು ವಿವಿಧ ವೇದಿಕೆಗಳಲ್ಲಿ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ ಇಂತಿದೆ.
ಫೆಬ್ರವರಿ 7ರಂದು ಸಂಜೆ 6.30 ಗಂಟೆಯಿಂದ ರಾತ್ರಿ 10.30 ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮಗಳು.
ಕಲಬುರಗಿಯ ವಿನ್ಯಾಸ ಧರ್ಮಗಿರಿ ಅವರಿಂದ ಭರತನಾಟ್ಯ, ಶ್ರೀ ಬಸವರಾಜ ಆಲಗೂಡು ಅವರಿಂದ ಗೀಗೀ ಪದ,
ಸಿದ್ದಣ್ಣ ಚನ್ನಮಲ್ಲಪ್ಪ ಕುಂಬಾರ ಅವರಿಂದ ಮೂಗಿನಿಂದ ಕೊಳಲು ವಾದನ,
ಮೈಸೂರಿನ ಸುಮ ರಾಜಕುಮಾರ ಅವರಿಂದ ಮಾತನಾಡುವ ಗೊಂಬೆ,
ಬಾಗಲಕೋಟೆಯ ಡಾ.ಸಿದ್ದರಾಮಯ್ಯ ಮಠಪತಿ ಅವರಿಂದ ಹಿಂದೂಸ್ತಾನಿ ಸಂಗೀತ,
ಬಸವಕಲ್ಯಾಣದ ಧೂಳಪ್ಪ ಮುಡಬಿ ಅವರಿಂದ ವಚನ ಸಂಗೀತ,
ಬೆಂಗಳೂರಿನ ಶ್ರೀ ವಿಜಯ ರಂಗ ಅವರಿಂದ ದಾಸರ ವಾಣಿ
ಬೆಂಗಳೂರಿನ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
ಸಂಜೆ 5.30 ಗಂಟೆಯಿಂದ ರಾತ್ರಿ 10.30 ಗಂಟೆಯವರೆಗೆ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣ (ಸಮಾನಾಂತರ ವೇದಿಕೆ-1) ದಲ್ಲಿ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ.
ಮೈಸೂರಿನ ಚಾಮುಂಡಿಪುರಂ ನೃತ್ಯ ಶಾಲೆಯ ಸೌಮ್ಯ ಅವರಿಂದ ಭರತನಾಟ್ಯ,
ಕಲಬುರಗಿಯ ಡಾ.ಛಾಯಾ ಭರತನೂರ ಅವರಿಂದ ವಚನ ಸಂಗೀತ,
ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗೇತಕರ್ ಅವರಿಂದ ಗೊಂದಲಿಗರ ಹಾಡು,
ಕಲಬುರಗಿಯ ಹಣಮಂತರಾವ ಮಂಗಾಣಿ ಅವರಿಂದ ಜಾನಪದ ಸಂಗೀತ,
ಕುಮಾರಿ ಶ್ರದ್ಧಾ ಅವರಿಂದ ಯೋಗ ನೃತ್ಯ,
ಬೆಳಗಾವಿಯ ಶಿವಪುತ್ರ ಬಡಿಗೇರ ಅವರಿಂದ ಜಾನಪದ ಗೀತೆ, ಕೊಪ್ಪಳದ ಶಿವಕುಮಾರ ಜಿ. ಮಹಂತ ಅವರಿಂದ ಭಾವಗೀತೆ, ಗದಗಿನ ಡಾ. ವಿಶ್ವನಾಥ ವಿ. ಹಿರೇಮಠ ಅವರಿಂದ ಹಿಂದೂಸ್ತಾನಿ ಸಂಗೀತ,
ಬಳ್ಳಾರಿಯ ಜಿ.ಚಂದ್ರಕಾಂತ ಅವರಿಂದ ವಚನ ಸಂಗೀತ, ಬಾಗಲಕೋಟೆಯ ಅಖಂಡೇಶ್ವರ ಎಂ.ಪತ್ತಾರ್ ಅವರಿಂದ ಸುಗಮ ಸಂಗೀತ,
ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯಿಂದ ನೃತ್ಯ ರೂಪಕ, ಕಲಬುರಗಿಯ ಗೋಪಾಲ ಕುಲಕóರ್ಣಿ ಅವರಿಂದ ಭಾವಗೀತೆ, ಬಸವರಾಜ ಸಾಲಿ ಮತ್ತು ಸೂರ್ಯಕಾಂತ ಡುಮ್ಮಾ ಅವರಿಂದ ಸುಗಮ ಸಂಗೀತ,
ಬೆಂಗಳೂರಿನ ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿಯಿಂದ ನೃತ್ಯ ರೂಪಕ,
ಕಲಬುರಗಿಯ ಗುರುನಾಥ ಮಾಸ್ತರ್ ಪಡಗಾನೂರ್ ಅವರಿಂದ ಡೊಳ್ಳಿನ ಹಾಡು,
ಬೆಳಗಾವಿಯ ಚಮಕೇರಿ ಸದಾಶಿವ ನಾಟ್ಯ ಸಂಘದಿಂದ ಶಿವಶಕ್ತಿ ಸಂವಾದ,
ಸಣ್ಣಾಟ ಹಾಗೂ ಲೋಹಿಯಾ ಕಲಾ ತಂಡದಿಂದ ಕಡಕೋಳದ ಬೆಳಕು ನಾಟಕ ಪ್ರದರ್ಶನಗೊಳ್ಳಲಿದೆ.
ಸಂಜೆ 5 ರಿಂದ ರಾತ್ರಿ 10.15 ಗಂಟೆಯವರೆಗೆ ಮಹಾತ್ಮಗಾಂಧಿ ಸಭಾಂಗಣ (ಸಮಾನಾಂತರ ವೇದಿಕೆ-2) ದಲ್ಲಿ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ.
ಬೆಂಗಳೂರಿನ ನಾರಾಯಣಸ್ವಾಮಿ ತಂಡದಿಂದ ಶಾಸ್ತ್ರೀಯ ಗಾಯನ,
ಭಾಗ್ಯ ಲಕ್ಷ್ಮೀ ಎಸ್. ಪಾಟೀಲ ಅವರಿಂದ ಭರತ ನಾಟ್ಯ, ವಿಜಯಪುರದ ಎಸ್.ಸಿ.ಕುರ್ಲೆ ಅವರಿಂದ ಜಾನಪದ ಹಾಡು, ಮಂಡ್ಯದ ಎನ್.ಟಿ.ಮೂರ್ತಾಚಾರ್ಯ ಅವರಿಂದ ಗೊಂಬೆ ಪ್ರದರ್ಶನ, ಕೊಪ್ಪಳದ ಲಕ್ಷ್ಮಣ ಪೀರಗಾರ ಅವರಿಂದ ನಾಟಕ, ಕಲಬುರಗಿಯ ಪಂಪಯ್ಯಾ ಸ್ವಾಮಿ ನಾಚವಾರ ಅವರಿಂದ ಬಬ್ರುವಾಹನ ದೊಡ್ಡಾಟ,
ಬಳ್ಳಾರಿಯ ಕೆ.ಹೊನುರುಸ್ವಾಮಿ ಅವರಿಂದ ತೊಗಲು ಬೊಂಬೆಯಾಟ ಹಾಗೂ ರಾಮನಗರದ ಹಂಸಧ್ವನಿ ಕಲಾಬಳಗ ಅವರಿಂದ ನಾಟಕ ಏರ್ಪಡಿಸಲಾಗಿದೆ.
Image credit: news18