Posts Slider

Karnataka Voice

Latest Kannada News

84-85 ಬ್ಯಾಚಿನ ಹುಬ್ಬಳ್ಳಿ ಜೆಜಿ ಕಾಲೇಜು ಹುಡುಗ್ರು ರಾಮದುರ್ಗದಲ್ಲಿ: ಅವತ್ತು ಯುವಕರಿದ್ದವರೂ ಇವತ್ತೇನಾಗಿದ್ದಾರೆ ಗೊತ್ತಾ..

1 min read
Spread the love

ಬೆಳಗಾವಿ: ಕೆಎಲ್ಇ ಸಂಸ್ಥೆಯ ಶ್ರೀ ಜಗದ್ಗುರು ಗಂಗಾಧರ ಶಿಕ್ಷಕರ ತರಬೇತಿ ಸಂಸ್ಥೆ ಹುಬ್ಬಳ್ಳಿಯ 1984-85 ರ ಬ್ಯಾಚಿನ ಗೆಳೆಯರ ಹಬ್ಬವನ್ನು ರಾಮದುರ್ಗ ನಗರದ ಕರ್ನಾಟಕ  ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಮೂವತ್ತೈದು ವರ್ಷಗಳ ಜೀವನ ಪ್ರಯಾಣದ ಸಿಹಿ ಕಹಿ ಜೀವನ ಚರಿತ್ರೆಯ ಮೌಲ್ಯಗಳನ್ನು ಮನ ಬಿಚ್ಚಿ ಹಂಚಿಕೊಂಡಿದ್ದು ಭಾವಸ್ಪರ್ಶಿಯಾಗಿತ್ತು.

ಸಾಧನೆಗೈದ ಸಾಧಕರು, ಆದರ್ಶಗಳನ್ನು ಮೇಳೈವಿಸಿಕೊಂಡ ಸ್ನೇಹಕೂಟ ಸಮಾಗಮದ ಸಂಗಮವಾಗಿತ್ತು. ಆಪ್ತ ಸಮಾಲೋಚನೆ ಒಂದೊಂದು ನೈಜ ಕಥೆಗಳಾಗಿ ಹೊರ ಹೊಮ್ಮಿದವು. ಅಗಲಿದ ಗುರುಗಳ ಹಾಗೂ ಮಿತ್ರರಿಗೆ ಅಶ್ರು ತರ್ಪಣವಾಗಿ ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗಿಸಿತ್ತು.

ಗೆಳೆಯರ ಹಬ್ಬದ ಪೂರ್ಣ ಪ್ರಮಾಣದ ಆದರಾತಿಥ್ಯ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕುಶಲ್ ಕರ್ಕಿಯವರ ಸಂಘಟನಾ ಚತುರತೆ ಇತರರಿಗೆ ಮಾದರಿಯಾಗಿತ್ತು. ಬೆಳಗಾವಿ ಕುಂದಾವನ್ನು ಪ್ರಕಾಶ ದೇಯಣ್ಣವರ ಎಲ್ಲರೂ ಕುಟುಂಬ ಸಮೇತ ತಿನ್ನುವಂತೆ ಕೊಟ್ಟಿದ್ದು ಸಿಹಿ ಸಿಹಿ ಶುಭ ಹಾರೈಸಿದಂತಿತ್ತು. ಸಮ್ಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಣ್ಣ ಹೆಬ್ಬಳ್ಳಿ ಇವರು ಧಾರವಾಡ ಪೇಡೆಯ ಹಂಚಿಕೆ ಮಧುರ ಮಾತುಗಳೊಂದಿಗೆ ಹಾಲು ಜೇನು ಬೆರೆತಂತಾಯಿತು.

ಕಡಕೋಳ ಹಾಗೂ ಎ.ಎಮ್.ಪಾಟೀಲ ರವರು ಕುಶಾಲರಿಗೆ ಸಾಥ್ ನೀಡಿದ್ದು ಸ್ನೇಹಪರತೆಗೆ ಸಾಕ್ಷಿಯಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ ಸಹೋದ್ಯೋಗಿ ನೌಕರ ಮಿತ್ರರು ನಾವು ನಿಮ್ಮೊಂದಿಗೆ ಎನ್ನುವ ಭಾವ ಮೂಡಿಸಿದ್ದು ವಿಶೇಷವಾಗಿತ್ತು. ರೇಷ್ಮೆ ಶಾಲು ಧರಿಸಿ ಬಿಮ್ಮನೆ ಬೀಗಿದ ಮಿತ್ರ ಮಂಡಳಿ ನಾವು ಯಾರಿಗೇನು ಕಮ್ಮಿಯಿಲ್ಲ ಎನ್ನುವಂತಿತ್ತು.

ಕರಿಕಟ್ಟಿಯವರ ಧರ್ಮಪತ್ನಿಯವರ ಸಾಧನೆ ತಿಳಿಯುತ್ತಿದ್ದಂತೆ ಅವರ ಪತ್ನಿ ಅಗಲಿದ್ದು ಸೇರಿದವರಿಗೆಲ್ಲ ಆಘಾತ ಮೂಡಿಸಿತು. ಕಾರ್ಗಿಲ್ ಯೋಧ ಗಂಗಾಧರ ಕಂಟೆಣ್ಣವರ ಅನುಭವ ಬಿಚ್ಚಿಟ್ಟಾಗ ದೇಶ ಪ್ರೇಮ ಉಕ್ಕಿ ಹರಿದು ಬೋಲೋ ಭಾರತ ಮಾತಾಕಿ ಜೈಕಾರ ಮೊಳಗಿತು.  ಮಣಕೂರ ರವರ ತರಗತಿ ಕೋಣೆಯಲ್ಲಿ ಮಂಗ ಬಂದಿದ್ದ ಕಥೆ ಕಣ್ಮುಂದೆ ಕಟ್ಟಿದಂತಿತ್ತು. ಜೀವನ ಚೈತ್ರದ ಈ ದಿನದ ಬಾಳ ಪುಟ ಸ್ಪುಟವಾಗಿತ್ತು.

ಇದೇ ಸಂದರ್ಭದಲ್ಲಿ ನಿವೃತ್ತಿಯಾದ ಉಮೇಶ ಶೆಟ್ಟಿ, ಗದಗ ಗ್ರಾಮೀಣ ಸಹಾಯಕ ನಿರ್ದೇಶಕ  ಸಿದ್ದಣ್ಣ ಹೆಬ್ಬಳ್ಳಿ ಹಾಗೂ ಕ.ಸ.ಗ್ರಾಮೀಣ ಪ್ರಾ.ಶಾ.ಶಿ.ಸಂಘದ ರಾಜ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ  ಇವರನ್ನು ಅಭಿನಂದಂದಿಸಿ ಸತ್ಕರಿಸಿ ಗೌರವಿಸಲಾಯಿತು. ಹಾವೇರಿ.ಬೆಳಗಾವಿ ಗದಗ ಚಿಕ್ಕೋಡಿ ಧಾರವಾಡ ಕಾರವಾರ ಜಿಲ್ಲೆಗಳಿಂದ ಆಗಮಿಸಿದ ಹಲವರು ಸಮಾವೇಶಗೊಂಡಿದ್ದರು.


Spread the love

Leave a Reply

Your email address will not be published. Required fields are marked *

You may have missed