7ವರ್ಷದ ಬಾಲೆಯೀಗ ಡಾಕ್ಟರ್

ನರಗುಂದ: ಗದಗ ಜಿಲ್ಲೆಯ ನರಗುಂದ ಪಟ್ಟಣದ 7 ವರ್ಷದ ಬಾಲಕಿ ವೈದೃತಿ ಕೋರಿಶೆಟ್ಟರ್ಗೆ ತಮಿಳುನಾಡು ಯುನಿವರ್ಸಲ್ ವಿವಿ. ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಪಟ್ಟಣದ ಸರ್. ಎಂ.ವಿಶ್ವೇಶ್ವರಯ್ಯ ಶಾಲೆಯ 2ನೇ ತರಗತಿಯಲ್ಲಿ ಬಾಲಕಿ ವ್ಯಾಸಂಗ ಮಾಡ್ತಿದ್ದಾಳೆ. ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಚಿವರು, ಶಾಸಕರು, ರಾಜ ಮಹಾರಾಜರ ಆಳ್ವಿಕೆಯ ಕಾಲಾವಧಿ ಕುರಿತು ಕೇಳುವ ಪ್ರಶ್ನೆಗಳಿಗೆ 7 ವರ್ಷದ ಬಾಲಕಿ ವೈದೃತಿ ಪಟಪಟನೆ ಉತ್ತರಿಸುತ್ತಾಳೆ.
ಈ ಬಾಲಕಿ ಅದ್ಬುತ ಸಾಧನೆ ಗುರ್ತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗುತ್ತಿದೆ. ತಮಿಳುನಾಡಿನ ಮಧುರೈನಲ್ಲಿ ನಡೆಯುವ ಯುನಿವರ್ಸಲ್ ವಿವಿ ಘಟಿಕೋತ್ಸವದಲ್ಲಿ ಇಂದು ಡಾಕ್ಟರೇಟ್ ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
ಈ ಬಾಲಕಿ ಕರ್ನಾಟಕ ದರ್ಶನ ಸೇವಾ ಅಭಿವೃದ್ಧಿ ಸಂಸ್ಥೆ ನೀಡುವ ಕರ್ನಾಟಕ “ಜ್ಞಾನ ಚಕ್ರವರ್ತಿ” ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಕೊಡಮಾಡುವ ಪ್ರಶಸ್ತಿ ಪಡೆದಿದ್ದಾಳೆ.