“7ನೇ ವೇತನ” ಆಯೋಗದ ಮುಂದೆ “ಗ್ರಾಮೀಣ ಶಿಕ್ಷಕರ ಸಂಘ”….
1 min read7 ನೇ ವೇತನ ಆಯೋಗ ಆಹ್ವಾನಿಸಿದ ಸಭೆಯಲ್ಲಿ ಶಿಕ್ಷಕರ ಅಹವಾಲು ಪ್ರಸ್ತಾವನೆಯನ್ನು ಮಂಡಿಸಲಿರುವ ಗ್ರಾಮೀಣ ಶಿಕ್ಷಕರ ಸಂಘ
ಹುಬ್ಬಳ್ಳಿ: ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕ ಹುಬ್ಬಳ್ಳಿ ಇದರ ಮುಖ್ಯ ಪದಾಧಿಕಾರಿಗಳನ್ನು ಕರ್ನಾಟಕ ರಾಜ್ಯ ಏಳನೇ ವೇತನ ಆಯೋಗದ ಕಾರ್ಯದರ್ಶಿಗಳು ಶನಿವಾರ ಅಪರಾಹ್ನ 1-30 ಕ್ಕೆ ರಾಜ್ಯ ವೇತನ ಆಯೋಗದ ಕಚೇರಿ 3ನೇ ಮಹಡಿ ಹಳೆಯ ಕಲ್ಲು ಕಟ್ಟಡ ಔಷಧ ನಿಯಂತ್ರಣ ಸಂಕೀರ್ಣ ಅರಮನೆ ರಸ್ತೆ ಬೆಂಗಳೂರ ಇಲ್ಲಿ ಸಭೆಗೆ ಆಹ್ವಾನಿಸಿದ್ದಾರೆ.
ಸದರಿ ಸಭೆಯಲ್ಲಿ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಅವರ ನೇತೃತ್ವದಲ್ಲಿ ವೇತನ ಪರಿಷ್ಕರಣೆ ವೇತನ ತಾರತಮ್ಯ, ನಗರ ಗ್ರಾಮೀಣ ಪ್ರದೇಶಗಳ ಮದ್ಯ ಅಂತರ ಮನೆ ಬಾಡಿಗೆ ಭತ್ಯೆ ವಿಶೇಷ ಭತ್ಯೆ ವಿಮಾ ಯೋಜನೆಗಳು ಮುಂಬಡ್ತಿ ಮುಂಗಡ ಕಾರ್ಯಭಾರದ ಒತ್ತಡ ನಾಲ್ಕು ಐದು ಆರು ವೇತನ್ವಾಯೋಗಗಳ ಹಾಗೂ ಅಧಿಕಾರಿ ಸಮಿತಿಯ ಶಿಫಾರಸ್ಸುಗಳನ್ನು ಅವಲೋಕಿಸಿ ಗ್ರಾಮೀಣ ಪ್ರದೇಶದವರಿಗೂ ಹೆಚ್ವಿನ ಪ್ರಾಧಾನ್ಯತೆ ನೀಡುವ ದಿಸೆಯಲ್ಲಿ ಬೇಡಿಕೆ ಅಭಿಪ್ರಾಯ ಅಹವಾಲು ಹಿನ್ನೆಲೆ ಮುನ್ನೆಲೆ ಪೇಟೆ ಧಾರಣಿ ಮುಂತಾದ ಅಂಶಗಳನನ್ನು ಮಂಡಿಸಲಿದ್ದಾರೆ.
ಮಂಡನಾ ನಿಯೋಗದಲ್ಲಿ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ, ಕಾರ್ಯಾಧ್ಯಕ್ಷರಾದ ಶರಣಪ್ಪಗೌಡ್ರ.ಆರ್.ಕೆ, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಶಿಸ್ತು ಸಮಿತಿ ಹೋರಾಟ ಸಮಿತಿ ಸಲಹಾ ಸಮಿತಿಗಳ ಅಧ್ಯಕ್ಷ ಹನುಮಂತಪ್ಪ ಮೇಟಿ, ಸಿದ್ದಣ್ಣ ಉಕ್ಕಲಿ, ಗೋವಿಂದ ಜುಜಾರೆ, ರಾಜ್ಯ ಉಪಾಧ್ಯಕ್ಷ ಧರ್ಮಣ್ಣ ಭಜಂತ್ರಿ, ಆರ್.ನಾರಾಯಣ ಸ್ವಾಮಿ, ನಾಗರಾಜು ಕೆ, ಶ್ರೀಧರ ಗಣಾಚಾರಿ, ಮಲ್ಲಿಕಾರ್ಜುನಯ್ಯ ಎಮ್.ಆರ್ ಹಾಗೂ ಮುಖ್ಯ ಪದಾಧಿಕಾರಿಗಳಾದ ಎ.ಐ.ಸೊಲ್ಲಾಪೂರ, ಮಹದೇಶ, ಸೋಮಶೇಖರ ಮುಂತಾದವರು ಉಪಸ್ಥಿತರಿರುವರು.