ದೆಹಲಿ ಚುನಾವಣೆ: ಆಮ್ ಆದ್ಮಿಯಿಂದ ಸ್ಪರ್ಧಿಸಿದ್ದ ಐವರು ಮುಸ್ಲಿಂ ಅಭ್ಯರ್ಥಿಗಳ ಭರ್ಜರಿ ಜಯ
1 min readನವದೆಹಲಿ: ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಐವರು ಮುಸ್ಲಿಂ ಅಭ್ಯರ್ಥಿಗಳು ಜಯ ಸಾಧಿಸಿದಾರೆ, ಎಲ್ಲದಕ್ಕಿಂತ ಹೆಚ್ಚಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಪ್ರದೇಶದಲ್ಲಿ ಜಯಭೇರಿ ಗಳಿಸಿದ್ದಾರೆ ಅನ್ನೋದು ಇಲ್ಲಿ ಮತ್ತೊಂದು ವಿಶೇಷ
ಓಕ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಮಾನತುಲ್ಲಾ ಖಾನ್ ಬಿಜೆಪಿಯ ಬ್ರಹ್ಮಸಿಂಗ್‌ರನ್ನು 36,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಪೌರತ್ವ ಕಾಯ್ದೆ ವಿರೋಧಿ ಹೋರಾಟದಿಂದ ದೇಶದ ಗಮನ ಸೆಳೆದಿರುವ ಶಾಹೀನ್‌ಬಾಗ್ ಮತ್ತು ಜಾಮಿಯಾ ನಗರಗಳು ಈ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತವೆ. ಕೇಂದ್ರ ದೆಹಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಾತಿಯ ಮಹಲ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಶೊಯಬ್ ಇಕ್ಬಾಲ್ 50,241 ಮತಗಳ ಅಂತರದಿಂದ ಬಿಜೆಪಿಯ ರವೀಂದರ್ ಗುಪ್ತಾರನ್ನು ಸೋಲಿಸಿದ್ದಾರೆ. ಬಲ್ಲಿಮರಾನ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಇಮ್ರಾನ್ ಹುಸೈನ್ ಬಿಜೆಪಿಯ ಲಾಲಾ ಸೋಧಿ ಎದುರು 36,172 ಮತಗಳ ಅಂತರದಿಂದ ಗೆದ್ದಿದ್ದಾರೆ. ಸೀಲಾಂಪುರ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಬ್ದುಲ್ ರೆಹಮಾನ್ ಗೆಲುವು ದಾಖಲಿಸಿದ್ದಾರೆ. ಮುಸ್ತಫಾಬಾದ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಹಾಜಿ ಯೂನಸ್ ಬಿಜೆಪಿಯ ಜಗದೀಶ್ ಪ್ರಧಾನ್‌ರನ್ನು ಪರಾಭವಗೊಳಿಸಿದ್ದಾರೆ.