Posts Slider

Karnataka Voice

Latest Kannada News

ಮಾವನೂರು ರಸ್ತೆಯು, ಕೆಂಪು ಬಣ್ಣದ ಬ್ಯಾಗೂ..! ನಡೆದದ್ದೇನು..!?

Spread the love

ಹುಬ್ಬಳ್ಳಿ: ನಗರದ ಮಾವನೂರ ರಸ್ತೆಯಲ್ಲಿ ಕೆಂಪು ಬಣ್ಣದ ಬ್ಯಾಗಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನ ಬೀದರ ತಾಲೂಕಿನ ಮರ್ಖಲ ಗ್ರಾಮದ ಸಲೀಂಮೀಯಾ ಮಹ್ಮದಹುಸೇನ ಮೌಜನ್, ರಮೇಶ ಮಾಣಿಕ ಕೊರವಾ, ಹುಬ್ಬಳ್ಳಿ ವಿಕಾಸನಗರದ ಸಿದ್ಧಲಿಂಗೇಶ್ವರನಗರದ ಸಿದ್ದಾರ್ಥ ಮೇಘರಾಜ ಹಬೀಬ, ಹಳೇಹುಬ್ಬಳ್ಳಿ ನೇಕಾರನಗರದ ಶಿಂಧೆ ಪ್ಲಾಟಿನ ಲಿಂಗೇಶಗೌಡ ಮುತ್ತನಗೌಡ ಪಾಟೀಲ ಹಾಗೂ ಗಣೇಶ ಕಾಲನಿಯ ಮಹೇಶ ಈರನಗೌಡ ಪಾಟೀಲ ಎಂದು ಗುರುತಿಸಲಾಗಿದೆ.

ECONOMIC AND NARCOTICS CRIME POLICE STATION HUBLI

ಬಂಧಿತರಿಂದ 8ಕೆಜಿ 495 ಗ್ರಾಂ ತೂಕದ ಗಾಂಜಾ, 5 ಮೊಬೈಲಗಳು ಹಾಗೂ 550 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಇವುಗಳ ಮೌಲ್ಯ 97550 ರೂಪಾಯಿಯದ್ದಾಗಿದೆ.

ಇನ್ಸಪೆಕ್ಟರ್ ಎಂ.ಎಸ್.ಹೂಗಾರ ನೇತೃತ್ವದಲ್ಲಿ ಪಿಎಸ್ಐ ಎಸ್.ಜಿ.ಕಾನಟ್ಟಿ, ಎಂ.ಎಸ್.ಕುರಹಟ್ಟಿ, ಸಿ.ಎಂ.ಕಂಬಾಳಿಮಠ, ಎಂ.ಎಚ್.ಹಾಲಾವರ, ಎ.ಎಂ.ತಹಶೀಲ್ದಾರ, ಪಿ.ಕೆ.ಬಿಕ್ಕನಗೌಡರ, ಗಿರೀಶ ಬಡಿಗೇರ, ರವಿ ಕೋಳಿ, ಫಕ್ಕಿರೇಶ ಸುಣಗಾರ, ಜಯಶ್ರೀ ಚಿಲ್ಲೂರ ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *