“50”ನೇ ಬರ್ತಡೇನಲ್ಲಿ ತಮ್ಮನ್ನೇ “ಲಕ್ಕಿ ರಾಸ್ಕಲ್” ಎಂದುಕೊಂಡ ಗಣಿಧಣಿ ಸಂತೋಷ ಲಾಡ್…!!!

ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವರೂ ಅಗಿರುವ ರಾಜ್ಯದ ಕಾರ್ಮಿಕ ಇಲಾಖೆಯ ಸಚಿವ ಸಂತೋಷ ಲಾಡ್ ಅವರಿಗೆ ಇಂದು ಐವತ್ತನೇಯ ಹುಟ್ಟುಹಬ್ಬದ ಸಂಭ್ರಮ. ತಮ್ಮ ಅರ್ಧಶತಕದ ಜನ್ಮದಿನವನ್ನ ವಿಭಿನ್ನವಾಗಿ ಆಚರಿಸಿಕೊಂಡರು.
ಧಾರವಾಡದ ಸರ್ಕಿಟ್ ಹೌಸ್ ನಲ್ಲಿ ಅಧಿಕಾರಿಗಳೊಂದಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಬಳಿಕ ಸಚಿವ ಸಂತೋಷ ಲಾಡ್ ಅವರು ಮಾತನಾಡಿ, ಖುಷಿ ಅನಿಸುತ್ತಿದೆ, ಲಕ್ಕಿ ರಾಸ್ಕಲ್ ಅಂತ ನಾನೇ ಹೇಳಿಕೊಳ್ಳುತ್ತೇನೆ ಎಂದರು.
ಪೂರ್ಣ ವೀಡಿಯೋ…
50 ವರ್ಷಗಳ ಕಾಲ ನನ್ನ ಜೀವನವನ್ನು ಕಳೆದಿದ್ದೇನೆ. ನನ್ನ ತಾಯಿ ಆಶೀರ್ವಾದ, ವಿಶೇಷವಾಗಿ ನನ್ನ ತಂದೆಯನ್ನು ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡೆ. ಲಾಡ್ ಪರಿವಾರದ ಆಶೀರ್ವಾದದಿಂದ ಜನರ ಆಶೀರ್ವಾದದಿಂದ ಇಲ್ಲಿಯವರೆಗೆ ಬಂದಿದ್ದೇನೆ. ಇದಕ್ಕಿಂತ ಒಳ್ಳೆಯ ಜೀವನ, ಒಳ್ಳೆಯದನ್ನು ನಾನು ಏನು ಕೇಳಲು ಬಯಸುವುದಿಲ್ಲ. ನನಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು. ಸಾರ್ವಜನಿಕ ಜೀವನವನ್ನ ಬದಲಾವಣೆ ತರುವ ಪ್ರಯತ್ನ ಮಾಡುತ್ತಿದ್ದೇನೆ, ಮುಂದೆಯೂ ಮಾಡುತ್ತೇನೆ ಎಂದರು.