Exclusive-ಮಾರುವೇಷದಲ್ಲಿ ಹುಬ್ಬಳ್ಳಿ ಪೊಲೀಸ್ ಕಾರ್ಯಾಚರಣೆ: ನಾಲ್ವರ ಬಂಧನ- ಸಿಕ್ಕಿದ್ದೇನು ಗೊತ್ತಾ..?
ಹುಬ್ಬಳ್ಳಿ: ಅವಳಿನಗರವೂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಾದಕ ವಸ್ತುಗಳ ರೇಡ್ ನಡೆಯುತ್ತಿರುವುದರಿಂದ ಬೆದರಿರುವ ದಂಧೆಕೋರರು, ದಂಧೆಯಲ್ಲಿ ಕಣ್ಣುಮುಚ್ಚಾಲೆ ಆರಂಭಿಸಿದ್ದರಿಂದ ಅವರದ್ದೇ ರೀತಿಯಲ್ಲಿ ಕಾರ್ಯಾಚರಣೆ ಮಾಡಿ, ನಾಲ್ವರನ್ನ ಬಂಧನ ಮಾಡುವಲ್ಲಿ ಬೆಂಡಿಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಲವು ದಿನಗಳಿಂದ ಪೊಲೀಸರಿಂದ ಕಣ್ಣು ತಪ್ಪಿಸಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನ ಬೆನ್ನು ಹತ್ತಿದ್ದ ಪೊಲೀಸರು ಕಳೆದ ಎರಡು ದಿನಗಳಿಂದಲೂ ಮಾರು ವೇಷದಲ್ಲಿ ಅಲೆದಾಡುತ್ತಿದ್ದರು. ಗ್ರಾಹಕರ ಸೋಗಿನಲ್ಲಿದ್ದ ಆರಕ್ಷಕರ ಬಲೆಗೆ ಕೊನೆಗೂ ನಾಲ್ಕು ಗಾಂಜಿಗರು ಸಿಕ್ಕಿ ಬಿದ್ದಿದ್ದಾರೆ.
ಬೆಂಡಿಗೇರಿ ಠಾಣೆಯ ವ್ಯಾಪ್ತಿಯಲ್ಲೇ ತಮ್ಮ ಗಾಂಜಾವನ್ನ ಮಾರಾಟ ಮಾಡುತ್ತಿದ್ದ ಇವರಿಂದ 1ಕೆಜಿಗೂ ಹೆಚ್ಚು ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ನಾಲ್ವರು ಬಂಧಿತರು, ಹುಬ್ಬಳ್ಳಿಯ ವೀರಾಪುರ ಓಣಿ, ಗಣೇಶಪೇಟೆ ಹಾಗೂ ಸೆಟ್ಲಮೆಂಟಿನ ನಿವಾಸಿಗಳೆಂದು ತಿಳಿದು ಬಂದಿದೆ.
ಬೆಂಡಿಗೇರಿ ಪೊಲೀಸರ ಈ ಕಾರ್ಯಾಚರಣೆ ಮತ್ತಷ್ಟು ದಂಧೆಕೋರರಲ್ಲಿ ನಡುಕ ಹುಟ್ಟಿಸಿದ್ದು, ಗಾಂಜಾ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ಮಾಡುವವರಿಗೆ ಚಳಿ ಬಿಡಿಸಿದಂತಾಗಿದೆ.