ಶ್ರೀಮಂತ “420 ಪಿಎಸ್ಐ”ನ ಅಂದರ್-ಬಾಹರ್ ಕಹಾನಿ: ಹಿಡಿದು ಬಿಟ್ರೇ ಒಬ್ಬೋಬ್ಬರಿಗೆ “ಪಾಂಚ್ ಹಜಾರ್”….!
1 min read‘ಮುಂಜಾನೆದ್ದು, ದೊಡ್ಡ ದೊಡ್ಡ ಮಾತುಗಳನ್ನ ಹೇಳಿ, ಜನರನ್ನ ಯಾಮಾರಿಸುವ 420 ಪಿಎಸ್ಐನ ಮೇಲುಸ್ತುವಾರಿ ಅಧಿಕಾರಿಗಳು ಬಾಯಿ ಮುಚ್ಚಿಕೊಂಡಿರುವುದಕ್ಕೆ ಕಾರಣವಾದರೂ ಏನು…? ಇವರಿಗೆ ಆತನ ಕಾಣಿಕೆಗಳು ಸಲ್ಲುತ್ತಿವೇಯಾ..? ಉತ್ತರದ ನಿರೀಕ್ಷೆಯಲ್ಲಿ..
ಧಾರವಾಡ: ನಗರದ ಪ್ರಮುಖ ಠಾಣೆಯೊಂದರಲ್ಲಿರುವ ಶ್ರೀಮಂತ ‘420 ಪಿಎಸ್ಐ’ ಕಹಾನಿ ದಿನವೊಂದಕ್ಕೆ ಹಲವು ಕರ್ನಾಟಕವಾಯ್ಸ್.ಕಾಂ ಸಿಗುತ್ತಿವೆ. ಇಂತವರಿಂದ ಕಾನೂನು ರಕ್ಷಣೆಯ ನಾಟಕ ನಡೆಯುತ್ತಿರುವುದು ಮಾತ್ರ ಸೋಜಿಗ.
ಹೌದು.. ಧಾರವಾಡದ ಠಾಣೆಯೊಂದರ ವ್ಯಾಪ್ತಿಯಲ್ಲಿ ಈ ಮಹಾನ್ ಹಣ ಭಕ್ಷಕ ದಿನಬೆಳಗಾದರೇ ಸ್ಕೀಂ ಹಾಕುವುದರಲ್ಲೇ ಬಿಜಿಯಾಗಿರುತ್ತಾನೆ. ಮೊನ್ನೆ ಮೊನ್ನೆ ಬಡವರ ಮಕ್ಕಳಿಗೆ ನೌಕರಿ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದವನಿಂದ ಲಕ್ಷ ರೂಪಾಯಿ ಮೊಬೈಲ್ ಖರೀದಿಸಿದ್ದ, ಭೂಪನ ಅಸಲಿಯತ್ತಿನ ಒಂದೊಂದೆ ಭಾಗವನ್ನ ವಿವರಿಸಲಾಗುತ್ತಿದೆ.
ಈತ ಎಂತಹ ಹಣಬಾಕನೆಂದರೇ, ಹೊಸದಾಗಿ ಬಂದಿರುವ ಎರಡ್ಮೂರು ಪೇದೆಗಳನ್ನ ಕರೆದುಕೊಂಡು ಹೋಗಿ ಅಂದರ್-ಬಾಹರ್ ಅಡ್ಡೆಗಳ ಮೇಲೆ ದಾಳಿ ಮಾಡಿದ ನಾಟಕ ಮಾಡುವುದು, ಅಲ್ಲಿ ಸಿಕ್ಕವರನ್ನ ಬಿಡಿಸಲು ತಾನೇ ಅದೇ ಪ್ರದೇಶದ ‘ಮೀಡಿಯೇಟರ್’ಗಳಿಗೆ ಹೇಳಿ ಕರೆಸಿ, ವ್ಯವಹಾರವನ್ನ ಕುದುರಿಸುವುದು ನಡೆದೇ ಇದೆ. ಒಬ್ಬನಿಂದ 5 ಸಾವಿರ ಸಿಕ್ಕರೇ ಸಾಕು, ನೋ ಕೇಸ್.
ದಕ್ಷ ಅಧಿಕಾರಿಯಾಗಿರುವ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಇಂಥವರ ಬಗ್ಗೆ ಜಾಗೃತೆ ವಹಿಸಬೇಕಿದೆ. ಈತನ ಜೊತೆಗೆ ಮಾಫಿಯಾದ ಗಿರಾಕಿಯೊಬ್ಬನಿದ್ದು, ಶಾಸಕರ ಹೆಸರು ಹೇಳಿ ಮುನ್ನಡೆಯುತ್ತಿದ್ದಾರೆ. ಇದೇಲ್ಲಾ ಬೇಕಾ…