ಬೇಲ್ ಆಗುವರೆಗೂ ಅರೆಸ್ಟ್ ಮಾಡದಿದ್ದಕ್ಕೆ ಧಾರವಾಡದ ಶ್ರೀಮಂತ “420 ಪಿಎಸ್ಐ” ಪಡೆದ ಹಣವೆಷ್ಟು…!?

ಧಾರವಾಡ: ತಾನು ಮಾಡಿದ ರಿಪೇರಿ ಹಣವನ್ನ ಕೇಳಿದ್ದಕ್ಕೆ ಹಿಗ್ಗಾ-ಮುಗ್ಗಾ ಥಳಿಸಿಕೊಂಡಿದ್ದ ನಿವೃತ್ತ ಪಿಎಸ್ಐ ಅಳಿಯ ದೂರು ನೀಡಿ, ಪ್ರಕರಣ ದಾಖಲು ಮಾಡಿದ್ದರೂ ಕೂಡಾ ಹಣವನ್ನ ಪಡೆದು, ಆರೋಪಿಗಳನ್ನ ಬಂಧಿಸದೇ ಇರುವುದು ಬೆಳಕಿಗೆ ಬಂದಿದೆ.

ಧಾರವಾಡದ ಮರಾಠಾ ಕಾಲನಿಯಲ್ಲಿನ ಬೈಕ್ ರಿಪೇರಿ ಮಾಡುತ್ತಿದ್ದ ಮೆಕಾನಿಕ್, ಕಾರಾಗೃಹದಲ್ಲಿದ್ದ ಅಧಿಕಾರಿಯೋರ್ವರ ಬುಲೆಟ್ ರಿಪೇರಿ ಮಾಡಿಕೊಟ್ಟಿದ್ದ. ಆದರೆ, ಕಾರಾಗೃಹದಲ್ಲಿದ್ದ ಅಧಿಕಾರಿ ಹಣವನ್ನ ಕೊಡದೇ, ಮರಾಠಾ ಕಾಲನಿಗೆ ಮಕ್ಕಳೊಂದಿಗೆ ಬಂದು ಮೆಕಾನಿಕ್ ನ್ನ ಥಳಿಸಿದ್ದ.
ಕೆಲಸ ಮಾಡಿದ್ದಕ್ಕೆ ಥಳಿತಕ್ಕೆ ಒಳಗಾದ ಮೆಕಾನಿಕ್ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ನೀಡಿದ್ದ. ಬಹುತೇಕ 325/21 ಪ್ರಕರಣವಿರಬೇಕು. ಅದರಲ್ಲಿ 504, 506 ಸೇರಿದಂತೆ ಹಲವು ಆ್ಯಕ್ಟಗಳನ್ನ ಹಾಕಲಾಗಿತ್ತಾದರೂ, ಆರೋಪಿಯನ್ನ ಬಂಧನ ಮಾಡಲು ಪೊಲೀಸರು ಮುಂದಾಗಲೇ ಇಲ್ಲಾ.
ಹಾಗಾಗಿಯೇ, ಸಮಾಜದ ಮುಖಂಡರಿಂದ ಬರೋಬ್ಬರಿ 60 ಸಾವಿರ ರೂಪಾಯಿ ಪಡೆದಿದ್ದಾರೆಂದು ಹೇಳಲಾಗಿದೆ. ಅದೇ ಕಾರಣಕ್ಕೆ ಅವರಿಗೆ ನ್ಯಾಯಾಲಯದಲ್ಲಿ ಬೇಲ್ ಆಗುವವರೆಗೆ ಅವರನ್ನ ಹುಡುಕಾಡುವ ಪ್ರಯತ್ನವನ್ನೂ ಮಾಡದೇ ಇರುವುದೇ 420 ಪಿಎಸ್ಐ ಕರ್ತವ್ಯ ನಿರ್ವಹಣೆ ಎಂದು ಹೇಳಲಾಗುತ್ತಿದೆ.
“30 ಲಕ್ಷ ರೂಪಾಯಿ ಕೊಟ್ಟು ಬಂದಿದ್ದೇನೆ ಮಕ್ಳಾ, ಗುಂಡ್ ಹಾಕ್ತೇನಿ, ಖಾರದ್ ಪುಡಿ ಎಲ್ಲಿ ಹಾಕಬೇಕ್ ಅಂತ್ ಗೊತೈತಿ ನಂಗ್” ಎಂದು ಕೈ ಲಾಗದವರ ಮುಂದೆ ಹೇಳಿ ಕಾಂಚಾಣ ಮಾಡುವ 420 ಪಿಎಸ್ಐಗೆ ಕಡಿವಾಣ ಹಾಕಬೇಕಲ್ಲವೇ..