ಎರಡ್ಮೂರು ಕೋಟಿ ಆಸ್ತಿಗೆ 2ಕೋಟಿ 86 ಲಕ್ಷ ಸ್ಯಾಂಪ್ ಡ್ಯೂಟಿ ಕಟ್ಟಿದ್ದಾಕೆ ಶಂಕರಣ್ಣ ಮುನವಳ್ಳಿಯವರೇ: ಪ್ರಶ್ನೆ ಎತ್ತಿದ ಶ್ರೀ ದಿಂಗಾಲೇಶ್ವರ ಶ್ರೀಗಳು..!
1 min readಹುಬ್ಬಳ್ಳಿ: ಮೂರು ಸಾವಿರ ಮಠದ ಉನ್ನತ ಸಮಿತಿ ಕೆಎಲ್‌ಇ ಸಂಸ್ಥೆಗೆ ನೀಡಿದ ಭೂಮಿಯ ಬೆಲೆ ಎರಡ್ಮೂರು ಕೋಟಿ ರೂಪಾಯಿ ಅಂತಾ ಇದಾರೆ. ಅಷ್ಟೇ ಬೆಲೆಬಾಳುವ ಆಸ್ತಿಗೆ 2ಕೋಟಿ 86 ಲಕ್ಷ ರೂಪಾಯಿ ಸ್ಟಾಂಪ್ ಡ್ಯೂಟಿ ಕಟ್ಟಿದ್ಯಾಕೆ ಎಂದು ಮೂರುಸಾವಿರ ಮಠದ ಉತ್ತರಾಧಿಕಾರಿ ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಪ್ರಶ್ನಿಸಿದ್ದಾರೆ.
ಕೆಎಲ್ಇ ಸಂಸ್ಥೆಯ ಶಂಕರಣ್ಣ ಮುನವಳ್ಳಿಯವರು, ಮೂರುಸಾವಿರ ಮಠದಿಂದ ಕೆಎಲ್ಇ ಸಂಸ್ಥೆ ಪಡೆದ 25 ಎಕರೆ ಜಮೀನಿಗೆ ಬಹಳಾ ಅಂದ್ರೇ ಎರಡ್ಮೂರು ಕೋಟಿ ರೂಪಾಯಿ ಇರಬಹುದು ಎಂದಿದ್ದಾರೆ. ಅದೇ ಕಾರಣಕ್ಕೆ ಶ್ರೀಗಳು, 2 ಕೋಟಿ ಬೆಲೆ ಬಾಳುವ ಆಸ್ತಿಗೆ 2.86 ಕೋಟಿ ಹಣವನ್ನ ಸ್ಟಾಂಪ್ ಡ್ಯೂಟಿ ಕಟ್ಟಿದ್ದು ಯಾಕೆ..? ಎಂದು ಪ್ರಶ್ನಿಸಿದ್ದಾರೆ.
ಮೂರುಸಾವಿರ ಮಠದ ಆಸ್ತಿ ಎರಡ್ಮೂರು ಕೋಟಿ ರೂಪಾಯಿಯದ್ದಾಗಿದ್ದರೇ, ಆ ಹಣವನ್ನ ನಾನು ಭಿಕ್ಷೆ ಬೇಡಿ ಕೆಎಲ್ಇ ಸಂಸ್ಥೆಗೆ ಕೊಡುತ್ತೇನೆ. ದಾನ ನೀಡಿರುವ ಭೂಮಿಯನ್ನ ಮರಳಿ ಕೊಡಲಿ ಎಂದು ಶ್ರೀಗಳು ಹೇಳಿದರು.
ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಶ್ರೀಗಳು, ಮೂರುಸಾವಿರ ಮಠದ ಆಸ್ತಿಯ ಉಳಿವಿಗಾಗಿ ಜೀವವಿರುವವರೆಗೂ ಹೋರಾಟ ಮಾಡುವುದಾಗಿ ಹೇಳಿದರು.