ಊರಿಗೆ ಹೋಗಬೇಕಾದವರನ್ನ ಮಸಣಕ್ಕೆ ಕಳಿಸಿದ ಗೂಡ್ಸ್ ರೈಲು: ದುರಂತಕ್ಕೆ ಹೊಣೆ ಯಾರು..?

ಔರಂಗಾಬಾದ್: ಕೊರೋನಾ ವೈರಸ್ ಈಗಾಗಲೇ ಮಹಾರಾಷ್ಟ್ರವನ್ನೂ ಬಿಡದೇ ಕಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇಂತಹ ಸಮಯದಲ್ಲಿ ತಮ್ಮೂರಿಗೆ ತೆರಳಲು ರೇಲ್ವೆ ನಿಲ್ದಾಣದ ಪಕ್ಕದಲ್ಲಿರುವ ಹಳಿಗಳ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 17ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಮಧ್ಯಪ್ರದೇಶದ ತಮ್ಮ ತಮ್ಮ ಗ್ರಾಮಗಳಿಗೆ ತೆರಳಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ರೇಲ್ವೆ ನಿಲ್ದಾಣಕ್ಕೆ ತೆರಳಿದ್ದರು. ಕಾರ್ಮಿಕರಿಗೆ ಯಾವುದೇ ವ್ಯವಸ್ಥೆ ಇಲ್ಲದ ಕಾರಣ, ಹಲವರು ರೇಲ್ವೆ ಹಳಿಗಳ ಮೇಲೆ ಮಲಗಿದ್ದರು. ತೀವ್ರ ನಿದ್ದೆಯಲ್ಲಿ ಮುಳುಗಿದ್ದ ಸಮಯದಲ್ಲೇ ಆಗಮಿಸಿರುವ ಗೂಡ್ಸ್ ರೈಲು 17ಜನರ ಆಹುತಿಯನ್ನ ಪಡೆದಿದೆ. ಬಡ ಕಾರ್ಮಿಕರು ಕೊರೋನಾದಿಂದ ಜೀವ ಉಳಿಸಿಕೊಳ್ಳಲು ಹೋಗಿ ರೇಲ್ವೆಯಿಂದ ಸಾವನ್ನಪ್ಪುವ ಸ್ಥಿತಿ ಬಂದಿದೆ.
ತಮ್ಮೂರಿಗೆ ತೆರಳುವ ಕಾರ್ಮಿಕರಿಗೆ ಸೂಕ್ತವಾದ ವ್ಯವಸ್ಥೆಯನ್ನ ಮಾಡಿದ್ದರೇ ಈ ಅವಘಡ ಸಂಭವಿಸುವ ಯಾವುದೇ ಸಾಧ್ಯತೆಗಳಿರಲಿಲ್ಲ. ಬಡವರನ್ನ ಸರಕಾರಗಳು ಯಾವ ರೀತಿ ನೋಡಿಕೊಳ್ಳುತ್ತೀವೆ ಎನ್ನುವುದಕ್ಕೆ ಈ ಘಟನೆಯೂ ಕೂಡಾ ಉದಾಹರಣೆಯಾಗಲಿದೆ.