ಧಾರವಾಡ ಜಿಲ್ಲೆಯಲ್ಲಿ ಎರಡೇ ದಿನದಲ್ಲಿ 16ಜನ ವೈರಸ್ ಪೀಡಿತರು ಗುಣಮುಖರಾಗಿ ಬಿಡುಗಡೆ
1 min readಧಾರವಾಡ: ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ನಿನ್ನೆ ಜೂನ್ 1 ರಂದು 05 ಜನ ಹಾಗೂ ಇಂದು ಜೂನ್ 2 ರಂದು 11 ಜನ ಸೇರಿ ಎರಡು ದಿನಗಳ ಅವಧಿಯಲ್ಲಿ ಒಟ್ಟು 16 ಜನ ಗುಣಮುಖರಾಗಿ ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆಯಾಗಿದ್ದಾರೆ .ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಗುಜರಾತಿನ ಅಹಮದಾಬಾದಿನಿಂದ ಮೇ.12 ರಂದು ಆಗಮಿಸಿದ್ದ, ಪಿ-879( 55, ಪುರುಷ),ಪಿ-880(31,ಪುರುಷ), ಪಿ-881(25,ಪುರುಷ),ಪಿ-882(70,ಪುರುಷ), ಪಿ-883(26,ಪುರುಷ), ಪಿ-884(18,ಪುರುಷ),ಪಿ-885(19,ಪುರುಷ), ಪಿ-886(20,ಪುರುಷ), ಪಿ-887(27,ಪುರುಷ)
ಮೇ.17 ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ಹುಬ್ಬಳ್ಳಿ ಕೇಶ್ವಾಪುರ ಶಾಂತಿನಗರದ ಪಿ-1124 (16, ಪುರುಷ) , ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದ್ದ ಪಿ-1123 ( 39,ಪುರುಷ), ಪಿ-1142 ( 28, ಮಹಿಳೆ), ಪಿ-1143 ( 25, ಪುರುಷ)
ಮೇ 21 ರಂದು ಮುಂಬೈನಿಂದ ಹಿಂದಿರುಗಿದ್ದ ಪಿ-1509 ( 35, ಪುರುಷ) ಹಾಗೂ ಮೇ 22 ರಂದು ನವದೆಹಲಿಯಿಂದ ವಾಪಸಾಗಿದ್ದ ಪಿ-1609( 22, ಪುರುಷ ) ಮತ್ತು ಪಿ-1610 ( 23, ಪುರುಷ) ಸಂಪೂರ್ಣ ಗುಣಮುಖರಾಗಿ
ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 27 ಜನ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ 23 ಜನ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.