ಭೀಕರ ರಸ್ತೆ ಅಪಘಾತ: 13ಜನರ ಸಾವು: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ತುಮಕೂರು: ಎರಡು ಕಾರುಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 13ಜನರು ಸಾವನ್ನಪ್ಪಿದ್ದು, ಇನ್ನೂ ನಾಲ್ವರಿಗೆ ತೀವ್ರ ಗಾಯವಾದ ಘಟನೆ ಕುಣಿಗಲ್ ತಾಲೂಕಿನ ಅವರೆಕೆರೆ ಗೇಟ್ ಬಳಿ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿರುವ ಘಟನೆಯಲ್ಲಿ ಕಾರುಗಳು ಸಂಪೂರ್ಣ ಜಖಂಗೊಂಡಿವೆ. ಒಂದು ಕಾರು ಯೂಟರ್ನ ತೆಗೆದುಕೊಳ್ಳುವಾಗ ಈ ದುರ್ಘಟನೆ ನಡೆದಿದ್ದು, ಮೃತರನ್ನ ಮಂಜುನಾಥ, ರತ್ನಮ್ಮ, ಗೌರಮ್ಮ, ಸುಂದರರಾಜ್, ರಾಜೇಂದ್ರ ಮತ್ತಿತರರು ಎಂದು ಗುರುತಿಸಲಾಗಿದೆ.
ಮಾರುತಿ ಬ್ರೀಜಾ ಮತ್ತು ಚೆವೋರ್ಲೇಟ್ ನಡುವೆ ಡಿಕ್ಕಿ ಸಂಭವಿಸಿದ್ದು, ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.