‘108’ರಲ್ಲೇ ಹೆರಿಗೆ- ಸುಮಿತ್ರಾ ಮಗು ಕ್ಷೇಮ: ಹೀಗೂ ಆಗತ್ತೆ..!
ಧಾರವಾಡ: ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಗರ್ಭಿಣಿ ಮಹಿಳೆಯೋವರ್ಳು 108 ಅಂಬ್ಯುಲೆನ್ಸನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಧಾರವಾಡ ಬೆಳಗಾವಿ ರಸ್ತೆಯಲ್ಲಿನ ಹೈಕೋರ್ಟ್ ಬಳಿ ನಡೆದಿದೆ.
ಧಾರವಾಡ ತಾಲೂಕಿನ ಮದಿಕೊಪ್ಪ ಗ್ರಾಮದ ಸುಮಿತ್ರಾ ಶಿಗಳ್ಳಿ ಎಂಬ ಗರ್ಭಿಣಿ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ಸೇರಿಸಲು ಕರೆದೊಯ್ಯಲಾಗುತ್ತಿತ್ತು. ಆದ್ರೆ ಮಾರ್ಗಮದ್ಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
108 ಅಂಬ್ಯುಲೆನ್ಸ್ ಸಿಬ್ಬಂದಿಗಳು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು, ಇದೀಗ ತಾಯಿ ಮತ್ತು ಮಗು ಆರಾಮಾಗಿದ್ದಾರೆ. ಹೆರಿಗೆ ನೋವು ಅತಿಯಾದ ಪರಿಣಾಮ ಅಲ್ಲಿಯೇ ಅಂಬ್ಯುಲೆನ್ಸ್ ನಿಲ್ಲಿಸಿ, ಕೆಲಸ ಸಮಯದ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಅಂಬ್ಯಲೆನ್ಸನಲ್ಲಿ ಶುಶ್ರೂಶಕ ಮಂಜುನಾಥ ಮುಂದಿನಮನಿ ಹಾಗೂ ದೇವೇಂದ್ರ ಎಸ್ ಗಂಗಾಧರ ಎಂಬುವವರಿದ್ದು, ಯಾವುದೇ ತೊಂದರೆಯಿಲ್ಲದ ಹಾಗೇ ಹೆರಿಗೆ ಮಾಡಿಸಿ, ಕರ್ತವ್ಯವನ್ನ ನಿಭಾಯಿಸಿದ್ದಾರೆ.