ಮೈಕ್ ಬಳಕೆ: ಮಸೀದಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ನಮಾಜ್ ಸಮಯದಲ್ಲಿ ಮಿತಿಮೀರಿದ ಶಬ್ಧ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಕ್ ಬಳಸಲು ಪಡೆದಿರುವ ಪರವಾನಿಗೆಯನ್ನ ಹಾಜರುಪಡಿಸುವಂತೆ ರಾಜ್ಯ ಹೈಕೋರ್ಟ್ ತಾಕೀತು ಮಾಡಿದೆ.
ಬೆಂಗಳೂರಿನ ಗೋವಿಂದರಾಜನಗರದ ಮಸೀದಿಯಲ್ಲಿ ದಿನಕ್ಕೆ ಐದು ಬಾರಿ ಧ್ವನಿವರ್ಧಕ ಬಳಕೆ ಮಾಡಲಾಗುತ್ತಿದೆ. ಇದರ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಲೌಡ್‍ಸ್ಪೀಕರ್ ಬಳಸಿ ಶಬ್ಧ ಮಾಲಿನ್ಯ ಮಾಡಲಾಗುತ್ತಿದೆ. ಇದಕ್ಕೊಂದು ಪರಿಹಾರ ಕಲ್ಪಿಸುವಂತೆ ಕೋರಿ ಸುಮಂಗಲಾ ಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಅರ್ಜಿಯ ವಿಚಾರಣೆ ಮಾಡಿದ ನ್ಯಾಯಪೀಠವು ಮೈಕ್ ಮತ್ತು ಲೌಡ್‍ಸ್ಪೀಕರನ ಪರವಾಣಿಗೆಯನ್ನ ಹಾಜರುಪಡಿಸುವಂತೆ ಮಸೀದಿಯವರಿಗೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ, ಕಾನೂನಿನ ಚೌಕಟ್ಟಿನಲ್ಲಿ ಲೌಡ್‍ಸ್ಪೀಕರ್ ಬಳಕೆ ಆಗುತ್ತಿದಿಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಪೊಲೀಸರಿಗೂ ನ್ಯಾಯಪೀಠ ಆದೇಶಿಸಿದೆ.