ಮಹೇಂದ್ರ ಕೌತಾಳಗೆ ಮಾತಲ್ಲೇ ಡಿಚ್ಚಿ ಕೊಟ್ಟ ಶಾಸಕ ಅಬ್ಬಯ್ಯ

ಹುಬ್ಬಳ್ಳಿ: ಸಿಎಎ, ಎನ್ಆರ್ ಸಿ ವಿರುದ್ದ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದ ಬಿಜೆಪಿ ಯುವ ಮುಖಂಡ ಮಹೇಂದ್ರ ಕೌತಾಳಗೆ ಶಾಸಕ ಪ್ರಸಾದ ಅಬ್ಬಯ್ಯ ಮಾತಿನಲ್ಲೇ ಡಿಚ್ಚಿ ಕೊಟ್ಟು, ಅವರು ಚರ್ಚೆಗೆ ಕರೆದರೇ ನಮ್ಮ ಕಾರ್ಯಕರ್ತರನ್ನ ಕಳಿಸಿ ಕೊಡುವುದಾಗಿ ಹೇಳಿದ್ದಾರೆ.
ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹೊಸ ಕಾನೂನು ಜಾರಿಯ ಬಗ್ಗೆ ಪ್ರತಿಭಟನೆಯ ಕರೆ ನೀಡಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದ ಬಿಜೆಪಿ ದಲಿತ ಮುಖಂಡರು, ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದರು. ಸ್ವತಃ ಮಹೇಂದ್ರ ಕೌತಾಳ ಶಾಸಕರೇ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದರು.
ಕೌತಾಳ ಆಹ್ವಾನ ಸ್ವೀಕರಿಸಿರುವ ಶಾಸಕ ಪ್ರಸಾದ ಅಬ್ಬಯ್ಯ, ಬೃಹತ್ ಪ್ರತಿಭಟನೆಯನ್ನ ಯಶಸ್ವಿಗೊಳಿಸಿದ ನಂತರ ಮಾತನಾಡಿ, ಕೌತಾಳ ಸಮಯ ಜಾಗ ನಿಗದಿ ಮಾಡಲಿ ಅಲ್ಲಿ ನಮ್ಮ ಕಾರ್ಯಕರ್ತರನ್ನ ಕಳಿಸುತ್ತೇನೆ ಎಂದು ಮಾತಿನಲ್ಲೇ ಡಿಚ್ಚಿ ಕೊಟ್ಟಿದ್ದಾರೆ. ಈಗ ಬಿಜೆಪಿಯಲ್ಲಿನ ಯುವ ದಲಿತ ಮುಖಂಡ ಮಹೇಂದ್ರ ಕೌತಾಳ, ಯಾವಾಗ ಬಹಿರಂಗ ಚರ್ಚೆಗೆ ಸಿದ್ದವಾಗುತ್ತಾರೋ ಕಾದು ನೋಡಬೇಕಿದೆ.