ಕುಂದಗೋಳದ ಸ್ವಾಮೀಜಿ ದುರ್ಮರಣ
ಧಾರವಾಡ: ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಶಿಷ್ಯರಾಗಿದ್ದ ಕುಂದಗೋಳ ಪಟ್ಟಣದ ಶಿವಾನಂದ ಮಠದ ಶ್ರೀ ಬಸವೇಶ್ವರ ಸ್ವಾಮೀಜಿಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಇದೇ ಘಟನೆಯಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ.
ಗ್ರಾಮೀಣ ಠಾಣೆ ವ್ಯಾಪ್ತಿಯ ರಮ್ಯ ರೆಸಿಡೆನ್ಸಿ ಬಳಿ ವಿಸ್ಟಾ ಹಾಗೂ ಆಲ್ಟೋ ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ವಾಮೀಜಿಗಳ ಕಾರು ಚಲಾಯಿಸುತ್ತಿದ್ದ ವೆಂಕನಗೌಡ ಪಾಟೀಲ ಸಾವಿಗೀಡಾಗಿದ್ದಾನೆ. ಇವರ ಜೊತೆಗಿದ್ದ ದೇಸಾಯಿಗೆ ತೀವ್ರ ಗಾಯಗಳಾಗಿದ್ದು, ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ಆಲ್ಟೋ ಕಾರಿನಲ್ಲಿದ್ದವರ ಮಾಹಿತಿ ದೊರಕಿಲ್ಲ. ಗ್ರಾಮೀಣ ಠಾಣೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.