ಏಲಕ್ಕಿ ನಾಡಿಗೆ ಒಲಿದು ಬಂದ ಸಮ್ಮೇಳನ: 23 ವರ್ಷಗಳ ನಂತರ ಹಾವೇರಿಯಲ್ಲಿ ಸಮ್ಮೇಳನ

ಕಲಬುರಗಿ: ಕರ್ನಾಟಕ ಸಾಹಿತ್ಯ ಪರಿಷತ್‌ನ ಕಾರ್ಯಕಾರಿಯ ಮಹತ್ವದ ಸಭೆ ಕಲಬುರಗಿಯಲ್ಲಿ ನಡೆದು, 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನ ಹಾವೇರಿಯಲ್ಲೇ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಕಲಬುರಗಿಯ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಮುಂಬರುವ ಸಾಹಿತ್ಯ ಸಮ್ಮೇಳನವನ್ನ ಹಾವೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಹೇಳಿದರು.