ಇದು 60:22 ಪ್ರೇಮಕಹಾನಿ: ಸಾಕ್ಷಿಯಾದ ತಾಜ್ಮಹಲ್

ಆಗ್ರಾ: ಪ್ರೀತಿಗೆ ವಯಸ್ಸು, ಅಂತಸ್ತು, ಮತ್ತಿನ್ಯಾವುದೇ ಗಡಿ ಇರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ವಿಧವಿಧವಾದ ಪ್ರೀತಿ ಪ್ರಸಂಗಗಳು ಆಗಾಗ ವರದಿಯಾಗುತ್ತಲೆ ಇರುತ್ತವೆ. ಈಗ ಅಂತಹುದ್ದೆ ವಿಚಿತ್ರ ಲವ್ ಕಹಾನಿ ಸಾಕ್ಷಿಯಾಗಿರುವುದು ಪ್ರೇಮದ ಭವ್ಯ ಸ್ಮಾರಕವೆಂದೇ ವಿಶ್ವ ಪ್ರಸಿದ್ದವಾದ ಆಗ್ರದ ತಾಜ್ ಮಹಲ್ ಪ್ರದೇಶದಲ್ಲಿ.
ತಾಜ್ಮಹಲ್ ನಗರದಲ್ಲಿ 60ವರ್ಷದ ಚಿರಯೌವನೆ ಜೊತೆಗೆ 22ವರ್ಷದ ಯುವಕ ಲವ್ನಲ್ಲಿ ಬಿದ್ದಿದ್ದು, ಇಬ್ಬರು ಪರಸ್ಪರ ಮದುವೆಗೆ ಅಣಿಯಾಗಿದ್ದಾರೆ. ಆದರೆ, ಈ ಯುವಕನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶಾಂತಿಯನ್ನು ಕದಡಿದ ಆರೋಪದಡಿ ದೂರು ದಾಖಲಾಗಿದೆ.
ಮಗನ ಜೊತೆ ಪೊಲೀಸ್ ಠಾಣೆಗೆ ಆಗಮಿಸಿದ ಮಹಿಳೆಯ ಪತಿ, ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ. ಇದೇ ವೇಳೆ ಯುವಕ ಮತ್ತು ಆತನ ಕುಟುಂಬಸ್ಥರು ಠಾಣೆಗೆ ಆಗಮಿಸಿದ್ದು ಪರಸ್ಪರ ವಾಗ್ವಾದ ನಡೆದಿದೆ.
ಯುವಕ ಮತ್ತು 60 ವರ್ಷದ ಮಹಿಳೆ ವಿವಾಹವಾಗುವುದಾಗಿ ಘೋಷಿಸಿಕೊಂಡ ನಂತರ ಠಾಣೆಯಲ್ಲಿ ಎರಡು ಕುಟುಂಬಗಳ ನಡುವೆ ಜಗಳವಾಗಿದೆ.
ಕುಟುಂಬದ ಸದಸ್ಯರು ಗಲಾಟೆ ನಿಲ್ಲಿಸದಿದ್ದಾಗ ಕೊನೆಗೆ ಬೇಸತ್ತ ಪೊಲೀಸರು ಯುವಕನ ವಿರುದ್ಧ ಶಾಂತಿ ಕದಡಿದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ಸದ್ಯದ ವಿಚಾರವೆಂದರೆ ಮಹಿಳೆಗೆ 7ಮಕ್ಕಳು ಹಾಗೂ 7ಮೊಮ್ಮಕ್ಕಳಿದ್ದಾರೆ.
ಇಂತಹ ಅಪರೂಪದ ಪ್ರಕರಣ ಅದ್ಯಾವ ಹಂತಕ್ಕೆ ಬಂದು ನಿಲ್ಲತ್ತೋ ಕಾದು ನೋಡಬೇಕು.