“ಆ ದಿನಗಳು” ಕೋಟ್ಯಾಧೀಶ ಚೇತನ ಮದುವೆ ಫೋಟೋ ಶೂಟ್ ಎಲ್ಲಿ ನಡೀತು ಗೊತ್ತಾ…
1 min read
ಬೆಂಗಳೂರು: ಮದುವೆ ಖುಷಿಯಲ್ಲಿರುವ ‘ಆ ದಿನಗಳು’ ಚೇತನ್ ಸ್ಪೆಷಲ್ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಅನಾಥ ಮಕ್ಕಳ ಜೊತೆ ಬುಗುರಿ ಆಟವಾಡಿ, ಪೇಟಿಂಗ್ ಮಾಡಿ ಚೇತನ್-ಮೇಘಾ ಫೋಟೋ ಶೂಟ್ ಮಾಡಿಸಿದ್ದಾರೆ. ಹಾಗೇ ಸಖತ್ ಡಿಫರೆಂಟ್ ಆಗಿ ಆಮಂತ್ರಣ ಪತ್ರಿಕೆಯನ್ನ ಡಿಸೈನ್ ಮಾಡಿಸಿದ್ದಾರೆ.
ಜನಪರ ಕಾಳಜಿ ಹೊಂದಿರುವ ಚೇತನ್ ಮದುವೆ ಸಂಭ್ರಮದಲ್ಲಿದ್ದಾರೆ. ತಮ್ಮ ಬಹುಕಾಲದ ಗೆಳತಿ ಮೇಘ ಜೊತೆ ಸಪ್ತಪದಿ ತುಳಿಯೋಕೆ ರೆಡಿಯಾಗಿರುವ ಚೇತನ್, ಕಲರ್ಫುಲ್ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ವಿಶೇಷ ಎಂದರೆ ಚೇತನ್ ಅವರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಯಾವುದೋ ಸ್ಟಾರ್ ಹೋಟೆಲ್ ಅಥವಾ ಕಲರ್ಫುಲ್ ಲೋಕೇಶನ್‌ನಲ್ಲಿ ಮಾಡಿಸಿಕೊಂಡಿಲ್ಲ. ಬದಲಾಗಿ ಶೇಷಾದ್ರಿಪುರಂನಲ್ಲಿರುವ ವಿನೋಬಾ ಭಾವೆ ಅನಾಥಶ್ರಮದ ಮಕ್ಕಳ ಜೊತೆ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅಸ್ಸಾಂ ಮೂಲದ ಮೇಘಾಗೆ ಮನಸೋತಿರುವ ಚೇತನ್, ಸತತ ಐದು ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಫೆಬ್ರವರಿ 2ಕ್ಕೆ ಸರಳವಾಗಿ ಬೆಂಗಳೂರಿನ ಗಾಂಧಿ ಭವನದ ಪಕ್ಕದಲ್ಲಿರೋ ವಿನೋಭಾ ಭಾವೆ ಭವನದಲ್ಲಿ ಸಂಜೆ 6 ಗಂಟೆಗೆ ಚೇತನ್- ಮೇಘಾ ಹಸೆಮಣೆ ಏರಲಿದ್ದಾರೆ.
ಚೇತನ ಕಲ್ಯಾಣದ ವಿಶೇಷ ಎಂದರೆ ಮದುವೆ ಪತ್ರಿಕೆ.. ಹೌದು ಈ ಆಮಂತ್ರಣ ಪರಿಸರ ಸ್ನೇಹಿ ಆಮಂತ್ರಣ ಪತ್ರಿಕೆಯಾಗಿದ್ದು, ಇದರಲ್ಲಿ ಕೆಲ ಬೀಜಗಳನ್ನ ಹುದುಗಿಸಿ ಇಡಲಾಗಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ಶುಭ ಹಾರೈಕೆಯೇ ನಮಗೆ ಹೂಗುಚ್ಚ ಹಾಗೂ ಉಡುಗೊರೆಯಾಗಿರಲಿ ಅಂತ ಬರೆದುಕೊಂಡಿದ್ದಾರೆ. ಇದರ ಜೊತೆಗೆ ಎಲ್ಲರ ಗಮನ ಸೆಳೆಯುವಂತ ಸಾಲುಗಳು ಅಂದ್ರೆ ಬೀಜವನ್ನು ಹುದುಗಿಕೊಂಡಿರುವ ಪರಿಸರ ಸ್ನೇಹಿ ಆ ಆಹ್ವಾನ ಪತ್ರವನ್ನು ಮಣ್ಣಲ್ಲಿ ಬಿತ್ತಿ ಚಿಗುರೊಡೆಯುತ್ತದೆ ಎಂಬ ಲೈನ್ ಎಲ್ಲರ ಗಮನ ಸೆಳೆಯುತ್ತದೆ.
ಚೇತನ್ ಅದ್ಧೂರಿಯಾಗಿ ಮದುವೆಯಾಗದೆ..ಸಖತ್ ಸಿಂಪಲ್ ಆಗಿ ಕಲ್ಯಾಣಕ್ಕೆ ರೆಡಿಯಾಗಿದ್ದಾರೆ. ಮದುವೆಯಲ್ಲಿ ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಹಾಗೂ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ.
ಸಾಕಷ್ಟು ಮಾದರಿಯಾಗಿ ಮದುವೆಯಾಗುತ್ತಿದ್ದಾರೆ ಕೋಟ್ಯಾಧೀಶ ಚೇತನ..