ಹುಲಿ ಬಂತು ಹುಲಿ: ಬೆದರಿದವರು ಏನು ಮಾಡಿದ್ದಾರೆ ಗೊತ್ತಾ../

ಧಾರವಾಡ: ಕಲಘಟಗಿ ತಾಲೂಕಿನ ಕೊನೆಯ ಗ್ರಾಮವಾದ ಬೆಂಡಲಗಟ್ಟಿ ಬಳಿ ಹುಲಿ ಪ್ರತ್ಯಕ್ಷವಾದ ನಂತರ ಇಲ್ಲಿನ ಪರಿಸ್ಥಿತಿಯೇ ಬದಲಾಗಿದ್ದು, ಇಲ್ಲಿ ತಿರುಗಾಡಲು ಜನರು ಭಯದಿಂದ ಹಿಂಜರಿಯುತ್ತಿದ್ದಾರೆ.
ಕಳೆದ ದಿನ ಸಂಜೆ ಹೊಲದಲ್ಲಿ ಕಂಡು ಬಂದ ಹುಲಿಯನ್ನ ನೋಡಿದ್ದ ಭರಮಣ್ಣ, ಓಡಿ ಬಂದು ಎಲ್ಲರಿಗೂ ತಿಳಿಸಿದ್ದ. ಅದಾದ ನಂತರ ಅರಣ್ಯ ಅಧಿಕಾರಿಗಳು ಡ್ರೋಣ ಕ್ಯಾಮರಾದ ಮೂಲಕ ಹುಲಿ ಇರುವುದನ್ನ ಕಂಡು ಹಿಡಿದು ಗ್ರಾಮದತ್ತ ಸುಳಿಯದಂತೆ ಎಚ್ಚರಿಕೆ ವಹಿಸಿದ್ದರು.
ಈಗಲೂ ಈ ಭಾಗದಲ್ಲಿ ಅರಣ್ಯ ಅಧಿಕಾರಿಗಳು ಮುಂಜಾಗೃತೆ ಕ್ರಮವನ್ನ ತೆಗೆದುಕೊಂಡಿದ್ದಾರಾದರೂ ಜನ ಮಾತ್ರ ಭಯದಿಂದ ತಮ್ಮ ಕೆಲಸ ಕಾರ್ಯಗಳಿಗಾಗಿ ಪರದಾಡುತ್ತಿದ್ದಾರೆ.