ಬಿಜೆಪಿ ಶಾಸಕರ ಸಭೆ ಕರೆಯುವಂತೆ ಯತ್ನಾಳ ಸಿಎಂಗೆ ಪತ್ರ ಬರೆದರಾ..?

ವಿಜಯಪುರ: ಸಚಿವ ಸಂಪುಟದಲ್ಲಿ ಮೂಲ ಬಿಜೆಪಿ ಶಾಸಕರಿಗೆ ತೀವ್ರ ಅಸಮಾಧಾನ ಮನೆ ಮಾಡುತ್ತಿದೆ. ಇದನ್ನ ಶಮನ ಮಾಡಬೇಕೆಂದರೇ ಶೀಘ್ರವೇ ಬಿಜೆಪಿ ಶಾಸಕರ ಸಭೆ ಕರೆಯಬೇಕೆಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆನ್ನಲಾಗಿದೆ.
ಪಕ್ಷಾಂತರಿ ಶಾಸಕರನ್ನ ಮಂತ್ರಿ ಮಾಡಿದ ಮೇಲೆ ಮೂಲ ಬಿಜೆಪಿ ಶಾಸಕರಲ್ಲಿ ಸಾಕಷ್ಟು ಅಸಮಾಧಾನ ಮೂಡಿಸಿದೆ. ಪ್ರಾದೇಶಿಕ ಸಮತೋಲನ ಕೂಡಾ ಆಗಿಲ್ಲ ಎಂಬುದು ಅನೇಕರ ವಾದವಾಗಿದೆ. ಹೀಗಾಗಿಯೇ ಬೇಗನೇ ಶಾಸಕಾಂಗ ಸಭೆಯನ್ನ ಕರೆದು ಆಗಿರುವ ಸಮಸ್ಯೆಯನ್ನ ಸರಿ ಮಾಡಬೇಕೆಂದು ಯತ್ನಾಳ ಕೋರಿದ್ದಾರಂತೆ.