ಹುಂಜಗಳ ಬಾಜಿ: 4 ಹುಂಜ, ಲಕ್ಷಾಂತರ ರೂಪಾಯಿ, 4ಬೈಕ್ ವಶ

ಯಾದಗಿರಿ: ಹುಂಜಗಳನ್ನ ಬಿಟ್ಟು ಬಾಜಿ ಕಟ್ಟಿದ್ದ 13 ಜನರನ್ನ ಪೊಲೀಸರು ಬಂಧಿಸಿ, 4 ಹುಂಜಗಳನ್ನ ತಮ್ಮ ಸುಪರ್ಧಿಗೆ ತೆಗೆದುಕೊಂಡ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಮನೂರಿನಲ್ಲಿ ನಡೆದಿರುವ ಘಟನೆಯಿದು. ಯಂಕುಬ ಬಿರಾದಾರ್ ಎಂಬುವರ ಜಾಗದಲ್ಲಿ ಹುಂಜಗಳ ಬಾಜಿ ನಡೆಯುತ್ತಿತ್ತು.
ಪ್ರಕರಣದಲ್ಲಿ ಬಂಧಿತರಾದ 13ಜನರಿಂದ 4ಹುಂಜ, 4ಕತ್ತಿ, 12ಬೈಕ್ ಸೇರಿದಂತೆ 1.13 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ.
ಡಿವೈಎಸ್ಪಿ ವೆಂಕಟೇಶ್, ಪಿಎಸೈ ಚೇತನ್ ನೇತೃತ್ವದಲ್ಲಿ ನಡೆದ ದಾಳಿ ನಡೆದಿದ್ದು, ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.