ಚೆನ್ನಮ್ಮ ವೃತ್ತದಲ್ಲಿ ಬೆಳ್ಳಂಬೆಳಿಗ್ಗೆ ಸಂಚಾರಿ ಪೊಲೀಸರು ಜನರಿಗೆ…!
ಹುಬ್ಬಳ್ಳಿ: ಸಾರ್ವಜನಿಕರು ಜಾಗೃತೆ ವಹಿಸದೇ ಕೊರೋನಾವನ್ನ ತಡೆಗಟ್ಟಲು ಸಾಧ್ಯವಿಲ್ಲ ಎಂಬುದನ್ನ ತಿಳಿ ಹೇಳುವುದಕ್ಕೆ ಹುಬ್ಬಳ್ಳಿ ಪೂರ್ವ ಸಂಚಾರಿ ಠಾಣೆಯ ಪಿಎಸೈ ಬೆಳಿಗ್ಗೇನೆ ಚೆನ್ನಮ್ಮ ವೃತ್ತದಲ್ಲಿ ಬಂದು ನಿಂತಿದ್ದರು.
ಪೂರ್ವ ಸಂಚಾರಿ ಪೊಲೀಸ್ ಠಾಣೆಯ PSI ಶರಣ್ ದೇಸಾಯಿ, ಕೋವಿಡ್ ಅರಿವು ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸಲು ಮುಂದಾಗಿದ್ದರು. ದಂಡ ಹಾಕುವುದು ನಿಮ್ಮನ್ನ ಎಚ್ಚರಿಸಲು ಹೊರತು, ಬೇರೆ ಉದ್ದೇಶವಲ್ಲ. ನಾವೂ ನಿಮ್ಮ ಆರೋಗ್ಯದ ದೃಷ್ಠಿಯಿಂದ ಹೇಳುತ್ತಿದ್ದೇವೆ ಎಂಬುದನ್ನ ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ರು.
ಚೆನ್ನಮ್ಮ ಸರ್ಕಲ್ ಬಳಿ ಮಾಸ್ಕ್ ಇಲ್ಲದೆ ಸಂಚಾರವನ್ನು ಮಾಡುತ್ತಿದ್ದ ಸಾರ್ವಜನಿಕರಿಗೆ, ಮಾಸ್ಕ್ ವಿತರಣೆಯನ್ನು ಮಾಡಿ ಮನೆಯಿಂದ ಹೊರಗೆ ಬರುವಾಗ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ದರಿಸಿಕೊಂಡೇ ಬರಬೇಕು ಎಂದು ಸಾರ್ವಜನಿಕರಿಗೆ ತಿಳಿ ಹೇಳುವ ಕಾರ್ಯವನ್ನು ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸರು ಮಾಡಿದರು.
ಪ್ರತಿದಿನವೂ ಕೊರೋನಾ ಹೆಚ್ಚಾಗುತ್ತಿದೆ. ಜೀವನ ಮುಖ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಅದನ್ನ ಉಳಿಸಿಕೊಳ್ಳಲು ಅಸಡ್ಡೆ ಯಾಕೆ ಎನ್ನುವ ಸಲಹೆಯನ್ನೂ ಪೊಲೀಸರು ನೀಡುತ್ತಿದ್ದರು. ಪಿಎಸೈ ಎಸ್. ಎಸ್. ದೇಸಾಯಿ, ಬಿ.ಎಸ್. ಅಣ್ಣಿಗೇರಿ, ಪಿ ಬಿ ಕಾಟೇ, ಯಶವಂತ ಬಾಡಿಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.