ಬಾಡದ “ಆ” ಮರದ ಬುಡದಲ್ಲಿ ಬಸವರಾಜನ ಶವ..!

ಧಾರವಾಡ: ತಾಲೂಕಿನ ಬಾಡ ಗ್ರಾಮದಲ್ಲಿ ವ್ಯಕ್ತಿಯೋರ್ವರು ಮರಕ್ಕೆ ನೇಣು ಹಾಕಿಕೊಂಡ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮಸ್ಥರೆಲ್ಲರೂ ಶವದ ಮುಂದೆ ನಿಂತು ಪೊಲೀಸರಿಗಾಗಿ ಕಾಯುತ್ತಿದ್ದಾರೆ.
ಬಸವರಾಜ ಬೆಂಗೇರಿ ನಿನ್ನೆ ರಾತ್ರಿಯೇ ಬಂದು ನೇಣು ಹಾಕಿಕೊಂಡಿರಬೇಕೆಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಯಾವ ಕಾರಣಕ್ಕೆ ಹೀಗೆ ಮಾಡಿಕೊಂಡಿದ್ದಾರೆಂಬುದು ತಿಳಿದು ಬಂದಿಲ್ಲ.
ಘಟನೆಯ ಬಗ್ಗೆ ಗ್ರಾಮಸ್ಥರಿಗೆ ಗೊತ್ತಾದ ತಕ್ಷಣವೇ ಮಹಿಳೆಯರು ಸೇರಿದಂತೆ ಹಲವರು ಘಟನಾ ಸ್ಥಳದಲ್ಲಿ ಜಮಾವಣೆಗೊಂಡಿದ್ದು, ಮಾಹಿತಿಯನ್ನ ಧಾರವಾಡ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿಯನ್ನ ಗ್ರಾಮದ ಬಸವರಾಜ ಬೆಂಗೇರಿ ಎಂದು ಗುರುತಿಸಲಾಗಿದ್ದು, ಕಾಲಲ್ಲಿ ಚಪ್ಪಲಿ ಇಲ್ಲದೇ ಹೋಗಿ, ನೇಣಿಗೆ ಶರಣಾಗಿದ್ದನ್ನ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಸವರಾಜ ಬೆಂಗೇರಿ ಕುಡಿದ ಅಮಲಿನಲ್ಲಿ ಹೀಗೆ ಮಾಡಿಕೊಂಡನಾ ಎಂಬ ಸಂಶಯ ಮೂಡಿದೆ.