ಮದುವೆಯಾಗಿ ಪೊಲೀಸ್ ಕಮೀಷನರ್ ಕಚೇರಿಗೆ ಬಂದ ರಾಜಣ್ಣ ಕೊರವಿ ಪುತ್ರಿ….!

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡ ರಾಜಣ್ಣ ಕೊರವಿ ಪುತ್ರಿ ಮದುವೆಯಾಗಿ, ರಕ್ಷಣೆ ಕೊಡುವಂತೆ ಕೋರಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಕಚೇರಿಗೆ ಬಂದಿದ್ದಾರೆ.
ಎಕ್ಸಕ್ಲೂಸಿವ್ ವೀಡಿಯೋ…
ಮೋನಲ್ ಮಲ್ಲಿಕಾರ್ಜುನ ಕೊರವಿ ತಾನು ಮದುವೆ ಮಾಡಿಕೊಂಡ ರಾಹುಲ ಬಸವರಾಜ ಚಂದಾವರಕರ ಎಂಬುವವರ ಜೊತೆ ಪೊಲೀಸ್ ಕಮೀಷನರ್ ಕಚೇರಿಗೆ ಬಂದು ರಕ್ಷಣೆ ಕೋರುತ್ತಿದ್ದಾರೆ.
ಈ ಬಗ್ಗೆ ಇಬ್ಬರು ಮಾತನಾಡಿದ್ದು, ಪೊಲೀಸರು ಊರನ್ನ ಬಿಡುವಂತೆ ಹೇಳುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.