ನವಲಗುಂದ ಮದೀನಾ ಸಹಕಾರಿ ಸಂಘದಿಂದ ಮಾಸ್ಕ್, ಸ್ಯಾನಿಟೈಜರ್ ವಿತರಣೆ

ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಮದೀನಾ ವಿವಿಧ ಉದ್ದೇಶಗಳ ಸಹಕಾರಿ ಸಂಘದಿಂದ ಸರಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಮಾಸ್ಕ್ ಹಾಗೂ ಸ್ಯಾನಿಟೈಜರ ವಿತರಣೆ ಮಾಡಲಾಯಿತು.
ಸರ್ಕಾರಿ ಉರ್ದು ಪ್ರೌಢಶಾಲೆ ನವಲಗುಂದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಸರದಿ ಸಾಲಿನಲ್ಲಿ ನಿಲ್ಲಿಸಿ, ವಿತರಣೆ ಮಾಡಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ಡಿ.ಜಿ.ಹುಲ್ಲೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪುರಸಭೆ ಸದಸ್ಯ ಬಾಬಾಜಾನ್ ಮಕಾಂದಾರ, ನಿವೃತ್ತ ಶಿಕ್ಷಕ ಎಂ.ಬಿ.ಮುಲ್ಲಾ, ಮದೀನಾ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಹಸನಸಾಬ ನಾಶಿಪುಡಿ, ಸಂಘದ ಸಿಬ್ಬಂದಿವರ್ಗ ಕೆ.ಎಸ್. ಹುಗ್ಗಿ, ಸುಲೇಮಾನ್ ನಾಶಿಪುಡಿ, ತಸ್ವೀರ್ ಹಬ್ಬಣ್ಣಿ, ಮತ್ತು ಬೋಧಕ ಬೋಧಕೇತರು ಕಾರ್ಯಕ್ರಮದ ವೇದಿಕೆ ಹಂಚಿಕೊಂಡಿದ್ದರು.