ಧಾರವಾಡದಲ್ಲಿ ಶಾಸಕ ಬೆಲ್ಲದ ಮನೆ ಮುಂದೆ ಹೊತ್ತಿ ಉರಿದ ಕಾರು
ಧಾರವಾಡ: ಕೆಲವೇ ನಿಮಿಷಗಳ ಶಾಸಕ ಅರವಿಂದ ಬೆಲ್ಲದರ ಧಾರವಾಡ ನಗರ ಮರಾಠಾ ಕಾಲನಿಗೆ ತೆರಳುವ ರಸ್ತೆಯಲ್ಲಿರುವ ಮನೆಯ ಮುಂದೆ ಸ್ವಿಪ್ಟ್ ಕಾರೊಂದಕ್ಕೆ ಬೆಂಕಿ ತಗುಲಿದ್ದು, ಕಾರಿನಲ್ಲಿದ್ದವರು ಹೊರಗೆ ಬಂದು ಪ್ರಾಣ ಉಳಿಸಿಕೊಂಡ ಘಟನೆ ನಡೆದಿದೆ.
ಧಾರವಾಡದ ಎಂ.ಬಿ.ಹಿರೇಕೊಪ್ಪ ಎಂಬುವವರಿಗೆ ಸೇರಿದ ಕಾರಿಗೆ ಸಡನ್ನಾಗಿ ಬೆಂಕಿ ತಗುಲಿದೆ. ಬ್ಯಾಟರಿಯಿಂದಲೇ ಬೆಂಕಿ ಹತ್ತಿದ್ದು, ಅದನ್ನ ನಂದಿಸುವಷ್ಟರಲ್ಲೇ ಆತಂಕವನ್ನ ಸೃಷ್ಟಿ ಮಾಡಿತ್ತು. ಕಾರಿನ ಇಂಜಿನನಲ್ಲಿ ಬೆಂಕಿ ಕಂಡ ತಕ್ಷಣವೇ ಕೆಳಗಿಳಿದ ಕಾರು ಮಾಲೀಕ, ಹೊರಗಡೆ ಓಡಿ ಹೋಗಿದ್ದಾರೆ.
ತಕ್ಷಣವೇ ಸ್ಥಳೀಯರು ನೀರನ್ನ ಹಾಕಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟರು. ಶಾಸಕರ ಮನೆಯ ಸಮೀಪವೇ ಘಟನೆ ನಡೆದಿದ್ದರಿಂದ ಮತ್ತಷ್ಟು ಆತಂಕ ಮನೆ ಮಾಡಿತ್ತು. ಬೆಂಕಿಯಿಂದ ಕಾರಿನ ಮುಂಭಾಗ ಬಹುತೇಕ ಸುಟ್ಟಿದ್ದು, ಮಾಲೀಕ ಘಟನೆಯಿಂದ ಕಂಗಾಲಾಗಿದ್ದ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಬರುವ ಮುನ್ನವೇ ಸ್ಥಳದಲ್ಲಿದ್ದವರೇ ಬೆಂಕಿಯನ್ನ ನಂದಿಸಿದ್ದರು. ಘಟನೆಗೆ ನಿಖರವಾದ ಕಾರಣವನ್ನ ತಿಳಿಯಲು ಸುಜುಕಿ ಕಂಪನಿಯ ಇಂಜಿನಿಯರಗಳು ಆಗಮಿಸಿದ್ದು, ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.