ಅದರಗುಂಚಿ ಪಿಡಿಓ ‘TRAP’- ಆತನ ಹಣದ ಹಪಾಹಪಿ ಎಂತಹದ್ದು ಗೊತ್ತಾ…!?

ಹುಬ್ಬಳ್ಳಿ: ಗ್ರಾಮಸ್ಥರೋರ್ವರ ಕೆಲಸ ಮಾಡಿ ಕೊಡಲು ಹಣದ ಬೇಡಿಕೆಯಿಟ್ಟಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೋರ್ವ ಲೋಕಾಯುಕ್ತರ ಬಲೆಗೆ ಸಿಲುಕಿರುವ ಘಟನೆ ತಾಲೂಕಿನ ಅದರಗುಂಚಿಯಲ್ಲಿ ನಡೆದಿದೆ.
ಪಿಡಿಓ ಮುಜಮ್ಮಿಲ್ ಕರಡಿಗುಡ್ಡ ಎಂಬುವವರೇ ಹತ್ತು ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಅಧಿಕಾರಿಗಳು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ಗ್ರಾಮದಲ್ಲಿ ಇ ಸ್ವತ್ತು ಮಾಡಿಕೊಡಲು ಹಣದ ಬೇಡಿಕೆಯನ್ನ ಪಿಡಿಓ ಇಟ್ಟಿದ್ದು, ಗ್ರಾಮಸ್ಥ ಲೋಕಾಯುಕ್ತರ ಮೊರೆ ಹೋಗಿದ್ದರು. ಇದರಿಂದ ದಾಳಿ ನಡೆದಿದೆ.
ಪಿಡಿಓ ಮುಜಮ್ಮಿಲ್ ಕರಡಿಗುಡ್ಡ ಅವರ ಧಾರವಾಡದ ಮನೆಯಲ್ಲೂ ತಪಾಸಣೆ ನಡೆದಿದೆ ಎಂದು ತಿಳಿದು ಬಂದಿದ್ದು, ಬಹುದೊಡ್ಡ ಬೇಟೆಯನ್ನ ಲೋಕಾಯುಕ್ತರು ಮಾಡಿದಂತಾಗಿದೆ.